

ರಾಣೆಬೆನ್ನೂರ: ಸಾಲ ಕಂತು ತುಂಬಬೇಕು ಎಂದು ಸಾಲಗಾರರಿಗೆ ಕಿರುಕುಳ ನೀಡುತ್ತಿದ್ದ ಮೈಕ್ರೋ ೈನಾನ್ಸ್ ಸಿಬ್ಬಂದಿ ಮಾಧ್ಯಮದವರು ಸ್ಥಳಕ್ಕೆ ಬರುತ್ತಿದ್ದಂತೆ ಮುಖ ಮುಚ್ಚಿಕೊಂಡು ಕಳ್ಳರಂತೆ ಓಡೋಡಿ ಹೋದ ಟನೆ ಇಲ್ಲಿಯ ಸಿದ್ದೇಶ್ವರ ನಗರದ ಗುರುವಾರ ನಡೆಯಿತು.
ಸಿದ್ದೇಶ್ವರ ನಗರದಲ್ಲಿ ನ್ಯೂ ಅಂಬಿಕಾ ಸಾವಜಿ ಹೋಟೆಲ್ ಮಾಲೀಕ ಸೂರಜ್ ಎಂಬುವರು ಮೈಕ್ರೋ ೈನಾನ್ಸ್ನಿಂದ 2.50 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಪ್ರತಿ ತಿಂಗಳು ಸಾಲದ ಕಂತು ಕಟ್ಟಿದ್ದಾರೆ. ಈ ತಿಂಗಳು ನಮ್ಮ ಅಜ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಂದಿನ ಸಲ ಸಾಲದ ಕಂತು ತುಂಬುತ್ತೇವೆ ಎಂದು ಹೇಳಿದ್ದಾರೆ.
ಇದಕ್ಕೆ ಒಪ್ಪದ ಮೈಕ್ರೋ ೈನಾನ್ಸ್ ಸಿಬ್ಬಂದಿ ಬೆಳಗ್ಗೆಯಿಂದಲೇ ಮನೆ ಬಾಗಿಲಿಗೆ ಹಾಗೂ ಹೋಟೆಲ್ನಲ್ಲಿ ನಿಂತು ಸಾಲದ ಕಂತು ತುಂಬುವಂತೆ ಪೀಡಿಸುತ್ತಿದ್ದರು. ಈ ಕುರಿತು ಸೂರಜ್ ಮಾಧ್ಯಮದವರಿಗೆ ಮಾಹಿತಿ ನೀಡಿದಾಗ ಮಾಧ್ಯಮದವರು ಸ್ಥಳಕ್ಕೆ ಬಂದು ಕ್ಯಾಮರಾ ಹಿಡಿಯುತ್ತಿದ್ದಂತೆ ಮೈಕ್ರೋ ೈನಾನ್ಸ್ ಸಿಬ್ಬಂದಿ ಮುಖ ಮುಚ್ಚಿಕೊಂಡು ಕಳ್ಳರಂತೆ ಓಡೋಡಿ ಹೋದವರು.
ನಿಜವಾಗಿಯೂ ಇವರು ಸಾಲ ವಸೂಲಿ ಮಾಡುವ ೈನಾನ್ಸ್ನವರು ಆಗಿದ್ದರೆ, ಕ್ಯಾಮರಾ ನೋಡಿದ ಕೂಡಲೇ ಏಕೆ ಓಡಿದರು. ನಿಂತು ಕೊಂಡು ಸಮಸ್ಯೆ ಹೇಳಬೇಕಿತ್ತು ಎಂದು ಸಾಲ ಪಡೆದ ಸೂರಜ್ ಕುಟುಂಬದವರು ಮೈಕ್ರೋ ೈನಾನ್ಸ್ನವರ ಬೆನ್ನು ಹತ್ತಿದರು. ಅಷ್ಟರಲ್ಲಿ ಮೈಕ್ರೋ ೈನಾನ್ಸ್ ಸಿಬ್ಬಂದಿ ಸಿದ್ದೇಶ್ವರ ನಗರದಿಂದ ಕಾಲ್ಕಿತ್ತು ಹೋಗಿದ್ದರು.
ಕಣ್ಣೀರು ಹಾಕಿದ ಕುಟುಂಬ...
ಮೈಕ್ರೋ ೈನಾನ್ಸ್ನವರ ಕಿರುಕುಳ ತಾಳಲಾರದೆ ಹಾಗೂ ಅವರು ಆಡುವ ಮಾತುಗಳನ್ನು ಕೇಳಿದ ಸೂರಜ್ ಕುಟುಂಬದವರು ಮಾಧ್ಯಮದವರ ಎದುರು ಕಣ್ಣೀರು ಹಾಕಿದರು. ಸಾಲದ ಕಂತು ತುಂಬುವುದು ಒಂದು ದಿನ ತಡವಾದರೂ ಇದೇ ರೀತಿ ತೊಂದರೆ ಕೊಡುತ್ತಾರೆ. ಇವರಿಂದ ಹಿಂಸೆಯಿಂದ ಅಕ್ಕಪಕ್ಕದವರಿಗೆ ಮುಖ ತೋರಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.