

ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಓಖಿಒ) 2022ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗೆ ಪತ್ರಕರ್ತರಿಂದ ವರದಿ/ಲೇಖನ/ಸುದ್ದಿಛಾಯಾಚಿತ್ರ/ವಿಡಿಯೊ ಕ್ಲಿಪ್ಪಿಂಗ್ ಆಹ್ವಾನಿಸಲಾಗಿದೆ.
ಮಾಧ್ಯಮದಲ್ಲಿ ಪ್ರಕಟವಾದ/ಪ್ರಸಾರವಾದ ವರದಿ ಸಹಿತ ಅರ್ಜಿಗಳನ್ನು ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಕಂದಾಯ ಭವನ, 3ನೇ ಮಹಡಿ, ಕೆ.ಜಿ.ರೋಡ್, ಬೆಂಗಳೂರು-560009 ಇಲ್ಲಿಗೆ ಅ.30 ರೊಳಗಾಗಿ ತಲುಪುವಂತೆ ಕಳುಹಿಸಬೇಕು ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಗೆ 2022 ವರ್ಷದಲ್ಲಿ ಪ್ರಕಟವಾಗಿದ್ದನ್ನು ಧೃಢೀಕೃತ ರೂಪದಲ್ಲಿ 3 ಪ್ರತಿಯಲ್ಲಿ ಕಳುಹಿಸಬೇಕು. ಅನುವಾದ ಮಾಡಿದ ವರದಿ/ಲೇಖನ ಪರಿಗಣಿಸುವುದಿಲ್ಲ. ಈಗಾಗಲೇ ಒಂದು ಬಾರಿ ಪ್ರಶಸ್ತಿಯನ್ನು ಪಡೆದವರು, ಮತ್ತೆ ಅದೇ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ.
ಪ್ರಶಸ್ತಿಗಳ ವಿವರ:
ವಿದ್ಯುನ್ಮಾನ (ಟಿವಿ)ವಿಭಾಗ: