ಟಿವಿ ಸ್ಟುಡಿಯೋಗೆ ನುಗ್ಗಿ ಕೊಲೆ ಆರೋಪಿಯನ್ನು ಬಂಧಿಸಿದ ಚಂಡೀಗಢ ಪೊಲೀಸರು: ಟಿವಿ ಕಾರ್ಯಕ್ರಮದಲ್ಲಿ ಕೊಲೆ ಮಾಹಿತಿ ಹೇಳಿದ್ದ ಕ್ಯಾಬ್​ ಚಾಲಕ

mandya crime
Published on

ಚಂಡೀಗಢ: ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಿರುವುದಾಗಿ ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ಹೇಳಿಕೊಂಡ ಕ್ಯಾಬ್​ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಚಂಡೀಗಢದ ನ್ಯೂಸ್​ ಚಾನೆಲ್​ನ ಸ್ಟುಡಿಯೋದಲ್ಲಿ ನೇರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಣಿಂದರ್​ ಸಿಂಗ್​ (31)ನನ್ನು ಪೊಲೀಸರು ಬಂಧಿಸಿದ್ದಾರೆ.

ಟಿವಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಪೊಲೀಸರು ಸ್ಟುಡಿಯೋಗೆ ತೆರಳಿ ಆರೋಪಿಯನ್ನು ಬಂಧಿಸಿದರು.
10 ವರ್ಷಗಳ ಅವಧಿಯಲ್ಲಿ ಆತ ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಿರುವುದಾಗಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದ.

2019ರ ಡಿ.31ರಂದು ಚಂಡೀಗಢದ ಹೋಟೆಲ್​ನಲ್ಲಿ ಲಿವ್​ ಇನ್​ ರಿಲೇಷನ್​ಷಿಪ್​ನಲ್ಲಿದ್ದ 27 ವರ್ಷದ ನರ್ಸ್ ಸರಬ್ಜಿತ್ ಕೌರ್ ಎಂಬ ಮಹಿಳೆಯನ್ನು ಆತ ಕೊಲೆ ಮಾಡಿದ್ದ. ಸರಬ್ಜಿತ್​ ಕೌರ್​, ನನ್ನ ಅತ್ತಿಗೆಯ ಸಹೋದರನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಹೀಗಾಗಿ ನಾನು ಆಕೆಯನ್ನು ಕೊಲೆ ಮಾಡಿದೆ ಎಂದು ಸುದ್ದಿವಾಹಿನಿಗೆ ತಿಳಿಸಿದ್ದ.

2010ರಲ್ಲಿ ಕರ್ನಾಲ್​ನಲ್ಲಿ ರೇಣು ಎಂಬ ಮಹಿಳೆಯನ್ನು ಕೊಲೆ ಮಾಡಿದೆ. ಈಕೆ ಕೂಡ ಉತ್ತರ ಪ್ರದೇಶದ ವ್ಯಕ್ತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಟಿವಿಗೆ ಮಾಹಿತಿ ನೀಡಿದ್ದಾನೆ.

2010 ರಲ್ಲಿ ಮಹಿಳೆಯನ್ನು ಕೊಂದಿದ್ದಕ್ಕಾಗಿ ಹರಿಯಾಣ ಪೊಲೀಸರು ಆತನನ್ನು ಬಂಧಿಸಿದ್ದರು. ಕೋರ್ಟ್​ನಲ್ಲಿ ಜಾಮೀನು ಪಡೆದು ಆತ ಹೊರ ಬಂದು ಮತ್ತೊಂದು ಕೊಲೆ ಎಸಗಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net