ಸಿಎಎ ಒಪ್ಪಿಕೊಳ್ಳಿ ಎಂದ ಕಾಂಗ್ರೆಸ್ ನಾಯಕ

JOHN
Published on

ಪಣಜಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಪಕ್ಷದ ನಿರ್ಧಾರವನ್ನೇ ಟೀಕಿಸಿರುವ ಗೋವಾ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಮತ್ತು ಮಾಜಿ ಸಂಸದ ಜಾನ್ ಫರ್ನಾಂಡಿಸ್, ಸಂಸತ್​ನಲ್ಲಿ ಅಂಗೀಕಾರವಾಗಿರುವ ಕಾಯ್ದೆಯನ್ನು ರಸ್ತೆಯಲ್ಲಿ ಪ್ರಶ್ನಿಸಬಾರದು ಎಂದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಉತ್ತಮವಾಗಿದ್ದು, ಅದನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಅಲ್ಲದೇ ನಾನು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿದವನಾಗಿದ್ದರೂ ಒಬ್ಬ ವ್ಯಕ್ತಿಯಾಗಿ ನನ್ನ ಅಭಿಪ್ರಾಯಗಳಿವೆ. ಕಳೆದ 70 ವರ್ಷಗಳಲ್ಲಿ ನಾವು ತಪು್ಪಗಳನ್ನು ಮಾಡಿದ್ದೇವೆ. ಈಗ ಮತ್ತೆ ಅದೇ ತಪು್ಪಗಳೊಂದಿಗೆ ಏಕೆ ಮುಂದುವರೆಯಬೇಕು? ಎಂದು ಫರ್ನಾಂಡಿಸ್ ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net