7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ!

voite
Published on

ನವದೆಹಲಿ: ಪಶ್ಚಿಮ ಬಂಗಾಳದ ನಾಲ್ಕು ಸೇರಿದಂತೆ ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಜುಲೈ 10ರಂದು ಚುನಾವಣೆ ನಡೆಯಲಿದ್ದು, ಜುಲೈ 13ರಂದು ಮತ ಎಣಿಕೆ ನಡೆಯಲಿದೆ.

ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ, ಉತ್ತರಾಖಂಡ, ಪಂಜಾಬ್, ಹಿಮಾಚಲಪ್ರದೇಶದ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯನ್ನು ಪ್ರಕಟಿಸಿದೆ.

ರುಪೌಲಿ (ಬಿಹಾರ), ರಾಯ್‌ಗಂಜ್, ರಣಘಾಟ್ ದಕ್ಷಿಣ, ಬಾಗ್ದಾ ಮತ್ತು ಮಾಣಿಕ್ತಾಲಾ (ಎಲ್ಲವೂ ಪಶ್ಚಿಮ ಬಂಗಾಳ), ವಿಕ್ರವಂಡಿ (ತಮಿಳುನಾಡು), ಅಮರವಾರ (ಮಧ್ಯಪ್ರದೇಶ), ಬದರಿನಾಥ್ ಮತ್ತು ಮಂಗಳೌರ್ (ಉತ್ತರಾಖಂಡ), ಜಲಂಧರ್ ಪಶ್ಚಿಮ (ಪಂಜಾಬ್) ವಿಧಾನಸಭಾ ಕ್ಷೇತ್ರಗಳು ಉಪಚುನಾವಣೆಗೆ ನಡೆಯಲಿವೆ. ಮತ್ತು ಡೆಹ್ರಾ, ಹಮೀರ್‌ಪುರ ಮತ್ತು ನಲಗಢ (ಹಿಮಾಚಲ ಪ್ರದೇಶ).

ವಿಧಾನಸಭಾ ಉಪಚುನಾವಣೆಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ: ಅಧಿಸೂಚನೆ:ಜೂನ್ 14 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 21 ನಾಮಪತ್ರ ಪರಿಶೀಲನೆ: ಜೂನ್ 24 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ: ಜೂನ್ 26 ಮತದಾನದ ದಿನಾಂಕ: ಜುಲೈ 10 ಫಲಿತಾಂಶ: ಜುಲೈ 13

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net