ಚುನಾವಣಾ ತಯಾರಿ ಚುರುಕುಗೊಳಿಸಿದ ಬಿಜೆಪಿ; ಉಪಾಧ್ಯಕ್ಷ ವಿಜಯೇಂದ್ರಗೆ ಮಹತ್ವದ ಜವಾಬ್ದಾರಿ ನೀಡಿದ ಪಕ್ಷ…

vijayendra pic
Published on

ಬೆಂಗಳೂರು: ಚುನಾವಣೆ ಇನ್ನೇನು ಹತ್ತಿರದಲ್ಲೇ ಇದ್ದು ಇದೀಗ ಸ್ಪಷ್ಟ ಬಹುಮತದ ಗುರಿ ಹೊಂದಿರುವ ಬಿಜೆಪಿ ತನ್ನ ತಯಾರಿಯನ್ನು ಚುರುಕುಗೊಳಿಸಿದೆ.

ಐದು ಹಂತಗಳಲ್ಲಿ ನಾಯಕರ ಪ್ರವಾಸ, ವಿವಿಧ ಸಮಾವೇಶಗಳು, ಪ್ರಣಾಳಿಕೆ ಸಂಗ್ರಹ ಕಾರ್ಯ, ಪ್ರಚಾರ ಹಾಗೂ ಫಲಾನುಭವಿಗಳ ಸಮ್ಮೇಳನ ಆಯೋಜನೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಚಟುವಟಿಕೆಗಳಿಗೆ ಪಕ್ಷದ ಪ್ರಮುಖರಾದ ಸಚಿವರು, ಶಾಸಕರು, ರಾಜ್ಯ ಪದಾಧಿಕಾರಿಗಳನ್ನು ಸಂಚಾಲಕರು, ಉಸ್ತುವಾರಿಗಳಾಗಿ ಬಿಜೆಪಿ ಪಕ್ಷ ನೇಮಕ ಮಾಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ‌ ನಳಿನ್ ಕುಮಾರ್ ಕಟೀಲ್ ಈ ಆದೇಶ ಹೊರಡಿಸಿದ್ದು ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ.

ವಿಜಯೇಂದ್ರಗೆ, ಬಿಜೆಪಿಯ 7 ಮೋರ್ಚಾಗಳ ಜಿಲ್ಲಾ ಸಮಾವೇಶಗಳ ಹೊಣೆಗಾರಿಕೆ ನೀಡಲಾಗಿದ್ದು ಈ ಮೋರ್ಚಾಗಳ ಜಿಲ್ಲಾ ಸಮಾವೇಶಗಳಿಗೆ ರಾಜ್ಯ ಸಂಚಾಲಕರಾಗಿ ವಿಜಯೇಂದ್ರರನ್ನು ನೇಮಕ ಮಾಡಲಾಗಿದೆ. ಒಟ್ಟು ಹತ್ತು ಜನರ ತಂಡಕ್ಕೆ ವಿಜಯೇಂದ್ರ ಸಂಚಾಲಕರಾಗಿದ್ದಾರೆ.

ರಾಜ್ಯದ ನಾಲ್ಕು ಭಾಗಗಳಲ್ಲಿ ನಾಲ್ಕು ತಂಡಗಳಾಗಿ ರಥಯಾತ್ರೆಯನ್ನು ಆಯೋಜಿಸಸಲಾಗಿದ್ದು ನಾಲ್ಕು ಕಡೆಯ ರಥಯಾತ್ರೆಗಳಿಗೂ ಸಂಚಾಲಕರ ನೇಮಕ ಮಾಡಲಾಗಿದೆ. ಎಲ್ಲ 4 ಯಾತ್ರೆಗಳಿಗೂ ಪ್ರಮುಖರು, ಸಹ ಪ್ರಮುಖರಾಗಿ ಸಚಿವ ಸಿಸಿ ಪಾಟೀಲ್ ಪರಿಷತ್ ಸದಸ್ಯ ಎನ್ ರವಿಕುಮಾರ್, ಹಾಗೂ ಗೀತಾ ವಿವೇಕಾನಂದ ನೇಮಕವಾಗಿದ್ದಾರೆ.

ಸಂಚಾಲಕರು ಮತ್ತು ಸಹ ಸಂಚಾಲಕರ ಹೆಸರುಗಳು ಹೀಗಿವೆ:
ಯಾತ್ರೆ -1
ಎಂ ರಾಜೇಂದ್ರ - ರಾಜ್ಯ ಉಪಾಧ್ಯಕ್ಷರು
ಎಸ್ ದತ್ತಾತ್ರಿ - ಮಾಜಿ ಜಿಲ್ಲಾ ಅಧ್ಯಕ್ಷರು,ಶಿವಮೊಗ್ಗ
ಕಿಶೋರ್ - ಜಿಲ್ಲಾ ಉಪಾಧ್ಯಕ್ಷರು ಉಡುಪಿ
ಯಾತ್ರೆ - 2
ಪರಿಷತ್ ಸದಸ್ಯ ಚಲವಾದಿ ನಾರಯಣಸ್ವಾಮಿ
ಜಿಲ್ಲಾ ಪ್ರಭಾರಿ ಸಚ್ಚಿದಾನಂದ
ವಿಧಾನಪರಿಷತ್ ಸದಸ್ಯ - ಅ ದೇವೇಗೌಡ
ಯಾತ್ರೆ - 3
ಮಾಜಿ ಪರಿಷತ್ ಸದಸ್ಯ ಅರುಣ್ ಶಹಾಪುರ
ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ
ಮಲ್ಲಿಕಾರ್ಜುನ ಬಾಳೀಕಾಯಿ - ಯುವ ಮೋರ್ಚಾ
ಯಾತ್ರೆ - 4
ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ, ಅಮರನಾಥ್ ಪಾಟೀಲ್, ಸಿದ್ದೇಶ್ ಪಾಟೀಲ್

ಒಟ್ಟಿನಲ್ಲಿ ಇದೀಗ ಕರ್ನಾಟಕ ಸರ್ಕಾರ ನಡೆಸುತ್ತಿರುವ ಬಿಜೆಪಿ ಕೂಡ ಚುರುಕಾದ ಚುನಾವಣಾ ಪ್ರಚಾರಕ್ಕೆ ಇಳಿದಿದ್ದು ಕಣ ರಂಗೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net