

ಯಾರೋ ಇನ್ನೇನೋ ಮಾಡಿದ್ದರಿಂದಾಗಿ ನಮ್ಮ ಅಹಂಕಾರಕ್ಕೆ ತೊಂದರೆಯಾಗು ತ್ತಿದೆ. ಯಾವಾಗ ಹೋಲಿಸುವುದನ್ನು ನಿಲ್ಲಿಸುವೆವೋ ಅಂದಿನಿಂದ ಜೀವನವು ನಿಜವಾಗಿಯೂ ಸುಂದರವಾಗುತ್ತದೆ. ಆಗ ಮಾತ್ರ ನಾವು ಜೀವನವನ್ನು ಪೂರ್ಣವಾಗಿ ಆನಂದಿಸಬಹುದು. ನಾವು ನಕ್ಷತ್ರಗಳಿಂದ ಕೂಡಿದ ರಾತ್ರಿಗಳನ್ನು ಖರೀದಿಸಲಾಗದು. ನಕ್ಷತ್ರಗಳಿಂದ ತುಂಬಿದ ರಾತ್ರಿ ಯನ್ನು ಹೇಗೆ ಆನಂದಿಸಬೇಕೆಂದು ತಿಳಿದಿರುವವರು ಹಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಸೂರ್ಯಾಸ್ತವನ್ನು ಖರೀದಿಸಲಾಗದು. ಹೌದು, ನಾವು ಪಿಕಾಸೋನ ಚಿತ್ರಕಲೆಯನ್ನು ಖರೀದಿಸಬಹುದು, ಆದರೆ ಸೂರ್ಯಾಸ್ತವನ್ನು ಹೇಗೆ ಆನಂದಿಸ ಬೇಕೆಂದು ತಿಳಿದಿರುವವರು ಚಿತ್ರಕಲೆ ಯನ್ನು ಖರೀದಿಸಲು ಆಸಕ್ತಿ ಹೊಂದಿರುವುದಿಲ್ಲ.
ಜೀವನವು ಅಂತಹ ಒಂದು ಚಿತ್ರಕಲೆ, ಅಂತಹ ಚಲಿಸುವ, ಜೀವಂತ ಚಿತ್ರಕಲೆ. ನಾವು ಗುಲಾಬಿ ಹೂವನ್ನು, ನಿಮ್ಮ ಅಂಗಳದಲ್ಲಿನ ಹಸಿರು ಮರವನ್ನು, ಪರ್ವತಗಳನ್ನು, ನದಿಯನ್ನು, ನಕ್ಷತ್ರಗಳನ್ನು, ಚಂದ್ರನನ್ನು ಹೇಗೆ ಆನಂದಿಸಬೇಕೆಂದು ತಿಳಿದಿದ್ದರೆ, ಜನರನ್ನು ಹೇಗೆ ಆನಂದಿಸಬೇಕೆಂದು ತಿಳಿದಿದ್ದರೆ, ನಾವು ಹಣದ ಬಗ್ಗೆ ಅಷ್ಟೊಂದು ವ್ಯಾಮೋಹಗೊಳ್ಳುವುದಿಲ್ಲ. ವ್ಯಾಮೋಹವು ಉದ್ಭವಿಸುತ್ತಿದೆ, ಏಕೆಂದರೆ ನಾವು ಆಚರಣೆಯ ಭಾಷೆಯನ್ನು ಮರೆತಿ ದ್ದೇವೆ. ಆದ್ದರಿಂದ ಹಣವೇ ಹೆಗ್ಗಳಿಕೆಗೆ ಏಕೈಕ ವಿಷಯ ವಾಗಿದೆ. ಹೀಗಾಗಿ ನಮ್ಮ ಜೀವನವು ತುಂಬಾ ಖಾಲಿಯಾಗಿದೆ. ಹಣವನ್ನು ತ್ಯಜಿಸಲು ಯುಗಯುಗಗಳಿಂದ ನಮಗೆ ಹೇಳಲಾಗಿದೆ; ಆದರೆ ಅದು ನಮ್ಮನ್ನು ಬದಲಾಯಿಸಿಲ್ಲ. ಜೀವನವನ್ನು ಆಚರಿಸೋಣ, ಸಂಭ್ರಮಿಸೋಣ.