

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಮಹೂರ್ತ(ನ.13)ಫಿಕ್ಸ್ ಆಗಿದ್ದು, ಶಿಗ್ಗಾವಿ ಕ್ಷೇತ್ರ ಅತಿ ಹೆಚ್ಚು ಮತದಾರರನ್ನು ಹೊಂದಿದೆ.
ಶಿಗ್ಗಾವಿಯಲ್ಲಿ 1,21,067 ಪುರುಷ, 1,15,717 ಮಹಿಳೆಯರು, 6 ತೃತೀಯ ಲಿಂಗಿಗಳು ಸೇರಿದಂತೆ 2,36,790 ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ 9,683 ಯುವ ಮತದಾರರು, 5251 ವಿಶೇಷ ಚೇತನ ಮತದಾರರಿದ್ದಾರೆ. 2802 ಮತದಾರರು 85 ವರ್ಷಕ್ಕೂ ಮೇಲ್ಪಟ್ಟವರಿದ್ದಾರೆ. ಒಬ್ಬರು ಎನ್‌ಆರ್‌ಐ ಮತದಾರಿದ್ದಾರೆ. ಒಟ್ಟು 241 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಇಲ್ಲಿ 482 ಬ್ಯಾಲೆಟ್ ಯೂನಿಟ್, 472 ಕಂಟ್ರೋಲ್ ಯೂನಿಟ್, 481 ವಿ.ವಿ.ಪ್ಯಾಟ್ ಅಳವಡಿಸಲಾಗುತ್ತದೆ.
ಸಂಡೂರಿನಲ್ಲಿ 1,17,739 ಪುರುಷ, 1,18,279 ಮಹಿಳಾ, 29 ತೃತೀಯ ಲಿಂಗಿಗಳು ಸೇರಿದಂತೆ 2,36,047 ಮತದಾರರಿದ್ದಾರೆ. ಇಲ್ಲಿ 10,593 ಯುವ ಮತದಾರರು, 2832 ವಿಶೇಷಚೇತನ ಮತದಾರರು, 1367 ಮತದಾರರು 85 ವರ್ಷ ಮೇಲ್ಪಟ್ಟವರಿದ್ದಾರೆ.
ಈ ಕ್ಷೇತ್ರದಲ್ಲಿ 259 ಮತಗಟ್ಟೆ ಸ್ಥಾಪಿಸಲಾಗುತ್ತದೆ. 505 ಬ್ಯಾಲೆಟ್ ಯೂನಿಟ್, 503 ಕಂಟ್ರೋಲ್ ಯೂನಿಟ್, 492 ವಿ.ವಿ.ಪ್ಯಾಟ್ ಬಳಸಲಾಗುತ್ತದೆ.
ಚನ್ನಪಟ್ಟಣದಲ್ಲಿ 1,12,271 ಪುರುಷ, 1,20,557 ಮಹಿಳಾ 8 ತೃತೀಯ ಲಿಂಗಿಗಳು ಸೇರಿದಂತೆ 2,32,836 ಮತದಾರರಿದ್ದಾರೆ. ಈ ಪೈಕಿ 8338 ಯುವ ಮತದಾರರು, 3011 ವಿಶೇಷ ಚೇತನರು, 1613 ಮತದಾರರು 85 ವರ್ಷಕ್ಕೂ ಮೇಲ್ಪಟ್ಟವರು ಹಾಗೂ 6 ಎನ್‌ಆರ್‌ಐ ಮತದಾರರಿದ್ದಾರೆ.
ಇಲ್ಲಿ 276 ಮತಗಟ್ಟೆ ಸ್ಥಾಪಿಸುತ್ತಿದ್ದು, 545 ಬ್ಯಾಲೆಟ್ ಯೂನಿಟ್, 586 ಕಮಟ್ರೋಲ್ ಯೂನಿಟ್, 538 ವಿ.ವಿ.ಪ್ಯಾಟ್ ಬಳಸಲಾಗುತ್ತದೆ.