ಪಪಂ 5ನೇ ವಾರ್ಡ್‌ಗೆ ಉಪ ಚುನಾವಣೆ ಇಂದು

Oplus_131072
ಯಳಂದೂರು ಪಟ್ಟಣದ ಸಿಡಿಎಸ್ ಸಮುದಾಯ ಭವನದಲ್ಲಿ ಶನಿವಾರ ಪಟ್ಟಣ ಪಂಚಾಯಿತಿಯ 5 ನೇ ವಾರ್ಡಿಗೆ ನಡೆಯಲಿರುವ ಚುನಾವಣೆಗೆ ಮತಗಟ್ಟೆಗೆ ಸಿಬ್ಬಂದಿ ತೆರಳಿದರು.
Published on

ಯಳಂದೂರು: ಪಟ್ಟಣ ಪಂಚಾಯಿತಿಯ 5ನೇ ವಾರ್ಡಿಗೆ ಶನಿವಾರ ಉಪಚುನಾವಣೆ ನಡೆಯಲಿದ್ದು ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಸಿಡಿಎಸ್ ಸಮುದಾಯ ಭವನದಲ್ಲಿ ಮತ ಕೇಂದ್ರ ಇರಲಿದೆ. ಪಟ್ಟಣ ಪಂಚಾಯಿತಿಯ ಸದಸ್ಯರಾಗಿದ್ದ ಕೆ.ಮಲ್ಲಯ್ಯ ಫೆ.25 ರಂದು ನಿಧನರಾಗಿದ್ದರು. ಇವರಿಂದ ತೆರವಾಗಿದ್ದ ಸ್ಥಾನಕ್ಕೆ ನ.23 ರಂದು ಉಪ ಚುನಾವಣೆ ನಿಗದಿಯಾಗಿತ್ತು.

ವಾರ್ಡಿನಲ್ಲಿ 314 ಪುರುಷ ಹಾಗೂ 344 ಮಹಿಳಾ ಮತದಾರರಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಶಶಿಧರ್ ಹಾಗೂ ಬಿಜೆಪಿಯಿಂದ ಮಹದೇವ ಮಾತ್ರ ಸ್ಪರ್ಧಿಸಿದ್ದಾರೆ. ಮತಗಟ್ಟೆಯಲ್ಲಿ ಒಬ್ಬ ಪಿಆರ್‌ಒ, ಎಪಿಆರ್‌ಒ, ಇಬ್ಬರು ಪಿಒ, ಒಬ್ಬರು ಡಿ ಗ್ರೂಪ್ ನೌಕರ ಹಾಗೂ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಚುನಾವಣೆ ನಡೆಯಲಿದೆ. ನ. 26 ರಂದು ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ನಂಜುಂಡಯ್ಯ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net