ಉಪ ಚುನಾವಣೆ; 24 ನಾಮಪತ್ರ ತಿರಸ್ಕೃತ

ECI
Published on

ಬೆಂಗಳೂರು: ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಉಪ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರಗಳಲ್ಲಿ 24 ನಾಮಪತ್ರ ತಿರಸ್ಕೃತಗೊಂಡಿವೆ.

ನಾಮಪತ್ರ ಪರಿಶೀಲನೆ ದಿನವಾದ ಸೋಮವಾರ ಶಿಗ್ಗಾವಿಯಲ್ಲಿ 46, ಸಂಡೂರು 13, ಚನ್ನಪಟ್ಟಣದಲ್ಲಿ 60 ಸೇರಿದಂತೆ ಒಟ್ಟು 115 ಪುರುಷರು 6 ಮಹಿಳೆಯರು ಸೇರಿದಂತೆ 121 ನಾಮಪತ್ರ ಸಲ್ಲಿಸಿದ್ದರು. ಶಿಗ್ಗಾವಿಯಲ್ಲಿ 7 ಮತ್ತು ಚನ್ನಪಟ್ಟಣದಲ್ಲಿ 17 ನಾಮಪತ್ರಗಳು ತಿರಸ್ಕೃತಗೊಂಡಿವೆ. ಸಂಡೂರಿನಲ್ಲಿ ಯಾವುದೇ ನಾಮಪತ್ರ ತಿಸ್ಕೃತವಾಗಿಲ್ಲ.

ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬಿ ಾರಂ ಪಡೆದು ಸಲ್ಲಿಸಲಾಗಿರುವ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿಲ್ಲ. ಅ.30 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net