ಎಚ್‌ಡಿಕೆ ಹಿಟ್ ಆಂಡ್ ರನ್ ಗಿರಾಕಿ!; ಸಿದ್ದರಾಮಯ್ಯ ವ್ಯಂಗ್ಯ

HDK Siddu
Published on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನಡುವಿನ ಮಾತಿನ ಸಮರ ಮುಂದುವರಿದಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷವನ್ನು ಮರೆತುಬಿಟ್ಟಿದ್ದಾರೆ. ಬಿಜೆಪಿ ವಕ್ತಾರರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅವರೊಂಥರಾ ಹಿಟ್ ಆಂಡ್ ರನ್ ಗಿರಾಕಿ ಎಂದು ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ.

ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಖಾಲಿ ಪೆನ್ ಡ್ರೈವ್ ಜೇಬಿಂದ ತೆಗೆಯೋದು ಒಳಗಿಟ್ಟುಕೊಂಡು ಹೋಗೋದು. ಇದೇ ಆಗೋಯ್ತು ಎಂದು ಲೇವಡಿ ಮಾಡಿದರು.

ದೇಶದ ಜನ ನೆಮ್ಮದಿಯಾಗಿ, ಸಂತೋಷದಿಂದ ಇದ್ದರೆ ಬಿಜೆಪಿಗೆ ನೆಮ್ಮದಿ ಹಾಳಾಗುತ್ತದೆ. ಹೊಟ್ಟೆಕಿಚ್ಚು ಹೆಚ್ಚಾಗುತ್ತದೆ. ಈಗ ನಾವು ಬಿಜೆಪಿ ಕಾಲದ ಎಲ್ಲಾ ಹಗರಣಗಳು, ಭ್ರಷ್ಟಾಚಾರದ ತನಿಖೆ ಆರಂಭಿಸಿದ್ದೇವೆ. ಸದ್ಯದಲ್ಲೇ ಬಿಜೆಪಿ ಬೇಳೆಕಾಳು ಹೊರಗೆ ಬರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net