ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ; ಹೊಟ್ಟಿಗೌಡರ

15-RNR-04
Published on

ರಾಣೆಬೆನ್ನೂರ: ವರ್ತಕರ ಅನೇಕ ಹೋರಾಟಗಳಿಗೆ ಸಂಘಟನೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರೂ ಕೂಡಿಕೊಂಡು ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪಗೌಡ ಹೊಟ್ಟಿಗೌಡ್ರ ಹೇಳಿದರು.
ನಗರದ ರೈಲ್ವೆ ನಿಲ್ದಾಣ ರಸ್ತೆಯ ವರ್ತಕರ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ವರ್ತಕರ ಸಂಘದ 78ನೇ ವಾಷಿರ್ಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ವರ್ತಕರ ಏಳಿಗೆಗೆ ಸಲುವಾಗಿ ಸರ್ಕಾರ ವಿರುದ್ಧ ಅನೇಕ ಹೋರಾಟಗಳನ್ನು ಮಾಡಿ ಜಯಗಳಿಸಿದ್ದೇವೆ. ಸಂಘ ವರ್ತಕರ ಹಿತ ಕಾಪಾಡಲು ನಿರಂತರ ಪ್ರಯತ್ನ ಮಾಡುತ್ತದೆ. ಎಪಿಎಂಸಿ ಪ್ರಾಗಂಣದಲ್ಲಿರುವ ಗಣೇಶ ದೇವಸ್ಥಾನದ ಸ್ಥಾಪನೆಯಾಗಿ 50 ವರ್ಷ ಪೂರೈಸಿದ ನಿಮಿತ್ತ ನವಗ್ರಹ ಮತ್ತು ಹನುಮಂತ ದೇವರ ಮೂತಿರ್ ಪ್ರತಿಷ್ಠಾಪಿಸಲು ಚಿಂತಿಸಲಾಗಿದೆ ಎಂದರು.
ಸಂದ ಉಪಾಧ್ಯಕ್ಷ ಮಾಲತೇಶ ಕಜ್ಜರಿ, ಗೌರವ ಕಾರ್ಯದಶಿರ್ ಗುರುಪ್ರಕಾಶ ಜಂಬಿಗಿ, ಪ್ರಮುಖರಾದ ಸಚಿನ ಲಿಂಗನಗೌಡರ, ಮಾಲತೇಶ ಕರಿಚಿಕ್ಕಪ್ಪನವರ, ಕಿರಣ ಅಂತರವಳ್ಳಿ, ರಘು ಮಜ್ಜಿಗಿ, ಹನುಮಂತಪ್ಪ ಬಣಕಾರ, ಹೇಮನಗೌಡ ಸೊರಟೂರ, ಶಿವಣ್ಣ ಸುಣಗಾರ, ಸುಧೀರ ಕುರುವತ್ತಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net