ನಿದ್ದೆ ಮಾಡುವಾಗ ಬೆಡ್​​​ ಮೇಲೆ ಮೂತ್ರ ಮಾಡಿದ ಉದ್ಯಮಿ! ತಮಾಷೆಯ ವಿಚಾರಗಳನ್ನು ಹಂಚಿಕೊಳ್ಳಲು ಮುಜುಗರ ಯಾಕೆ? honeymoon

Honeymoon
Published on

honeymoon: ಅಮೆರಿಕ ಮೂಲದ ಉದ್ಯಮಿಯೊಬ್ಬರು ತಮ್ಮ ಹನಿಮೂನ್​​ ಕಥೆಯನ್ನು ಲಿಂಕ್ಡ್‌ಇನ್​​ನಲ್ಲಿ ಹಂಚಿಕೊಂಡಿದ್ದು, ಇದೀಗ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ರಾಕೆಟ್ ಕ್ಲಿಕ್ಸ್‌ನ ಅಧ್ಯಕ್ಷ ಮತ್ತು ಸ್ಟರ್ಲಿಂಗ್ ಲಾಯರ್ಸ್ ಎಲ್‌ಎಲ್‌ಸಿಯ ಸಹ-ಸಂಸ್ಥಾಪಕ ಆಂಥೋನಿ ಕಾರ್ಲ್ಸ್ ಹನಿಮೂನ್​​​ನಲ್ಲಿ ಹಾಸಿಗೆ ಒದ್ದೆ ಆಗಿರುವ ಬಗ್ಗೆ (Anthony Karls) ಈ ಪೋಸ್ಟ್​​​ನ್ನು ಹಂಚಿಕೊಂಡಿದ್ದಾರೆ.

ನಾನು ನನ್ನ ಜೀವನದ ಅತ್ಯಂತ ಅದ್ಭುತ ಕ್ಷಣವಾದ ಹನಿಮೂನ್ ಮಾಡಿಕೊಳ್ಳಲು ಸಿಯಾಟಲ್‌ಗೆ ಹೋಗಿದ್ದೆ. ಅಲ್ಲಿ ಮಸಾಲೆಯುಕ್ತ ಏಡಿ ಸೂಪ್ ಮಾಡಿ ಕುಡಿದಿದ್ದೇನು. ಅದು ತುಂಬಾ ಖಾರವಾಗಿತ್ತು ಸೇವಿಸಲು ಅಷ್ಟೇ ರುಚಿಯಾಗಿತ್ತು. ನಮನೆಗೆ ಬಂದು ನಿದ್ದೆಗೆ ಜಾರಿದ. ನನಗೆ ಎಚ್ಚರವಾದಾಗ ಬೆಡ್​​​ ಎಲ್ಲ ಒದ್ದೆಯಾಗಿದೆ. ನಿದ್ರೆಯಲ್ಲೇ ನಾನು ಮೂತ್ರ ಮಾಡಿದ್ದೇನೆ.ನೀವು ನಿದ್ರೆಯಲ್ಲಿ ಮೂತ್ರ ಮಾಡಿದ್ದೀರಾ ಎಂದು ಈ ಬಗ್ಗೆ ತನ್ನ ಹೆಂಡತಿ ಹೇಳಿದ್ದಾಳೆ. ಇದು ಒಳ್ಳೆಯದು ಅಥವಾ ಕೆಟ್ಟದೋ ಎಂಬುದು ನನಗೆ ಗೊತ್ತಿಲ್ಲ, ಇವಾಗಲ್ಲೂ ಅದನ್ನು ನಾವು ನೆನಪಿಸಿ ನಗುತ್ತೇವೆ ಎಂದು ಹೇಳಿದ್ದಾರೆ.

ಇಷ್ಟು ದೊಡ್ಡ ಉದ್ಯಮಿಯಾದರು, ನಾನು ಇಂತಹ ಚಿಕ್ಕ ವಿಷಯವನ್ನು ಹಾಗೂ ಇದು ನನ್ನ ವೈಯಕ್ತಿಕ ವಿಚಾರವಾದರೂ ಅದನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಏಕೆಂದರೆ ಕೆಲವರು ತಮ್ಮ ಇಂತಹ ತಮಾಷೆಯ ವಿಚಾರಗಳನ್ನು ಹಂಚಿಕೊಳ್ಳಲು ಮುಜುಗರ ಮಾಡಿಕೊಳ್ಳುತ್ತಾರೆ. ಆದರೆ ಇದು ತಪ್ಪು ಏಕೆಂದರೆ ನಾನು ಯಾರ ಮುಂದೆಯೂ ನಾಚಿಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನಾನು ದೊಡ್ಡ ವ್ಯಕ್ತಿ ಎಂಬ ಕಾರಣಕ್ಕೆ ಎಲ್ಲವನ್ನು ಮರೆಮಾಚುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಇನ್ನು ಈ ಪೋಸ್ಟ್​​ ಬಗ್ಗೆ ಅನೇಕರು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net