ಫೆ.24ಕ್ಕೆ ವ್ಯಾಪಾರ ತರಬೇತಿ ಕಾರ್ಯಗಾರ

smile member k.v.vasanthkumar press meet
ಸ್ಮೈಲ್ ಸದಸ್ಯ ಕೆ.ವಿ.ವಸಂತಕುಮಾರ್ ಮಾತನಾಡಿದರು.
Published on

ಶಿವಮೊಗ್ಗ: ಶಿವಮೊಗ್ಗ ಮಲ್ನಾಡ್ ಇನ್‌ಸ್ಟಿಟ್ಯೂಟ್ ಆಫ್ ಲೀಡರ್‌ಶಿಪ್ ಎಕ್ಸಲೆನ್ಸ್(ಸ್ಮೈಲ್) ಸಂಸ್ಥೆಯು ಜೆಸಿಐ ಶಿವಮೊಗ್ಗ ಮಲ್ನಾಡ್ ಸಹಯೋಗದಲ್ಲಿ ಫೆ.24 ಮತ್ತು 25ರಂದು ಅಂತಾರಾಷ್ಟ್ರೀಯ ಮಟ್ಟದ ವ್ಯಾಪಾರ ತರಬೇತಿ ಕಾರ್ಯಗಾರ ದಿಕ್ಸೂಚಿಯನ್ನು ಏರ್‌ಪೋರ್ಟ್ ರಸ್ತೆಯ ಮಲ್ನಾಡ್ ಶೈರ್ ರೆಸಾರ್ಟ್‌ನಲ್ಲಿ ಆಯೋಜಿಸಿದೆ ಎಂದು ಸ್ಮೈಲ್ ಸದಸ್ಯ ಕೆ.ವಿ.ವಸಂತಕುಮಾರ್ ತಿಳಿಸಿದರು.

21 ದೇಶಗಳಲ್ಲಿ ಹಲವು ಅಂತಾರಾಷ್ಟ್ರೀಯ ತರಬೇತಿ ನೀಡಿರುವ ಖ್ಯಾತ ಹಿಮಾದ್ರಿ ಸಿನ್ಹಾ ಹಾಗೂ ಚೇತನಾ ಜೈನ್ ಅವರು ಪ್ರಮುಖ ಕಾರ್ಯಾಗಾರಕ್ಕೆ ಆಗಮಿಸಿ ತರಬೇತಿ ನೀಡುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಗಾರದಲ್ಲಿ ವ್ಯವಹಾರಕ್ಕೆ ಸಂಬಂಧಪಟ್ಟ ಅತ್ಯಂತ ಮಹತ್ವದ ಅಂಶಗಳಾದ ಬ್ರಾಂಡಿಂಗ್, ವ್ಯವಹಾರದ ವಿಸ್ತರಣೆ, ವ್ಯವಹಾರದಲ್ಲಿ ನೈತಿಕತೆ, ಮಾರಾಟ ಮತ್ತು ಗ್ರಾಹಕರ ನಿರ್ವಹಣೆ, ವ್ಯಾಪಾರದ ಗುರಿಗಳನ್ನು ಹೊಂದಿಸುವುದು, ಉದ್ಯೋಗಿಗಳ ನಿರ್ವಹಣೆ ಹಾಗೂ ಪ್ರೇರಣೆ ಹೀಗೆ ಹಲವು ವಿಷಯಗಳ ಕುರಿತು ಮಾಹಿತಿ ಹಂಚಿಕೊಳ್ಳುವರು ಎಂದರು.
ಹೆಸರು ನೋಂದಾಯಿಸಲು ಅಧ್ಯಕ್ಷ ಶಂಕರ್ ಸರ್ಜಿ(9972066065) ಅವರನ್ನು ಸಂಪರ್ಕಿಸಬಹುದು. ಕಾರ್ಯಕ್ರಮದ ಅಧ್ಯಕ್ಷ ಶಂಕರ್ ಸರ್ಜಿ, ಸ್ಮೈಲ್ ಕಾರ್ಯದರ್ಶಿ ಎ.ಎನ್.ಚಿದಾನಂದ, ಪ್ರಮುಖರಾದ ಗಜಾನನ ಹೆಗಡೆ, ಎಸ್.ಎನ್.ಶ್ರೀನಾಗ್, ಆದರ್ಶ ಸರಾಫ್, ಸುನಿಲ್‌ಕುಮಾರ್, ಗೌರೀಶ್ ಭಾರ್ಗವ್, ಎಸ್.ಪ್ರದೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net