

ಬೆಂಗಳೂರು: ಕಳೆದ 14ರಿಂದ ವಿಧಿಸಲಾಗಿದ್ದ ಲಾಕ್ಡೌನ್ ತೆರವು ಹಿನ್ನೆಲೆಯಲ್ಲಿ ಬಸ್ ಸಂಚಾರ ಎಂದಿನಂತೆ ಇರಲಿದೆ ಎಂದು ಸಾರಿಗೆ ಸಂಸ್ಥೆ ಸ್ಪಷ್ಟಪಡಿಸಿದೆ.
ಸರ್ಕಾರದ ಆದೇಶದಂತೆ ಬೆಂಗಳೂರಿನಲ್ಲಿ ಬುಧವಾರದಿಂದ ಲಾಕ್ ಡೌನ್ ತೆರವು ಹಿನ್ನಲೆಯಲ್ಲಿ, ಬೆಳಗ್ಗೆ 6 ಗಂಟೆಯಿಂದ ರಾಜಧಾನಿಯಿಂದ ಇತರೆ ಸ್ಥಳಗಳಿಗೆ ಬಸ್ ಸಂಚಾರ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.
ಇದಲ್ಲದೇ, ಬಿಎಂಟಿಸಿ ಬಸ್ಗಳು ಕೂಡ ಸಂಚರಿಸಲಿವೆ. ಇತರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಕೂಡ ಎಂದಿನಂತೆ ಕಾರ್ಯಾಚರಿಸಲಿವೆ. ಕಳೆದ ಒಂದು ವಾರದಿಂದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.