

ಬೆಟ್ಟದಪುರ: ಸಮೀಪದ ಚಪ್ಪರದಹಳ್ಳಿ ಮಾರ್ಗವಾಗಿ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸಲು ಕೆಎಸ್‌ಆರ್‌ಟಿಸಿ ಪಿರಿಯಾಪಟ್ಟಣ ಘಟಕದ ವತಿಯಿಂದ ಆರಂಭಿಸಿರುವ ಬಸ್ ಸೇವೆ ಚಾಲನೆಗೂ ಮುನ್ನ ಚಪ್ಪರದಹಳ್ಳಿ ಗ್ರಾಮಸ್ಥರು ಪೂಜೆ ಸಲ್ಲಿಸಿದರು.
ಗ್ರಾಮದ ಶ್ರೀ ಕೊಳ್ಳಿಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬಳಿಗೆ ಆಗಮಿಸಿದ ಬಸ್‌ಗೆ ಹೂಗಳಿಂದ ಸಿಂಗರಿಸಿ ಬಳಿಕ ಅರ್ಚಕ ಮಂಜು ಆರಾಧ್ಯ ನೇತೃತ್ವದಲ್ಲಿ ಪೂಜೆ ಸಲ್ಲಿಸಿ, ಸಂಚಾರಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಗ್ರಾಮದ ಮುಖಂಡ ಸಿ.ಆರ್ ಆಂಜನಿಗೌಡ ಮಾತನಾಡಿ, ನಮ್ಮ ಗ್ರಾಮಕ್ಕೆ 12 ಗಂಟೆ ಸಮಯದಲ್ಲಿ ಬರುತ್ತಿದ್ದ ಬಸ್‌ನ್ನು ಸೇವೆ ಸ್ಥಗಿತಗೊಂಡು 15 ವರ್ಷಗಳಾಗಿವೆ. ಈಗ ಅದೇ ಸಮಯಕ್ಕೆ ಬಸ್ ಸೇವೆ ಮತ್ತೆ ಆರಂಭಕ್ಕೆ ಗ್ರಾಮಸ್ಥರು ಪಶುಸಂಗೋಪನ ಹಾಗೂ ರೇಷ್ಮೆ ಸಚಿವರಿಗೆ ಕೆ.ವೆಂಕಟೇಶ್ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ ಎಂದರು.
ಮುಖಂಡರಾದ ಸಿ.ಎನ್ ಬಸವರಾಜು, ಕಾಳೇಗೌಡ, ಸಿ.ಕೆ ಪ್ರಕಾಶ್, ಚೌಡೇಗೌಡ, ಕೃಷ್ಣೇಗೌಡ, ಅಂಜನಿಗೌಡ, ನಾಗರಾಜೇಗೌಡ, ರಾಮೇಗೌಡ, ನಾರಾಯಣ, ರಾಜಭೋವಿ, ಚಂದ್ರಚಾರಿ, ಜಗದೀಶ, ಉಮೇಶ್, ಮಹೇಶ್, ರಾಜ, ಮಂಜೇಗೌಡ, ಮಂಜಚಾರಿ ಸೇರಿದಂತೆ ಚಾಲಕ ಯೋಗೇಶ, ನಿರ್ವಾಹಕ ನಟರಾಜು ಇತರರು ಇದ್ದರು.