

ರಾಣೆಬೆನ್ನೂರ: ತಾಲೂಕಿನ ಹೂಲಿಹಳ್ಳಿ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೇವೆ ಒದಗಿಸುವಂತೆ ಹಾಗೂ ಕಡ್ಡಾಯವಾಗಿ ಎಲ್ಲ ಬಸ್ಗಳನ್ನು ನಿಲ್ಲಿಸುವಂತೆ ಆಗ್ರಹಿಸಿ ಭಾರತ ವಿದ್ಯಾಥಿರ್ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ಗ್ರಾಮಸ್ಥರು ಶನಿವಾರ ಬಸ್ಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಸಂಟನೆಯ ತಾಲೂಕು ಉಪಾಧ್ಯಕ್ಷ ಮಹೇಶ ಮರೋಳ ಮಾತನಾಡಿ, ತಾಲೂಕಿನಾದ್ಯಂತ ಸಾರಿಗೆ ಸಂಸ್ಥೆ ಬಸ್ಗಳನ್ನು ಶಾಲಾ-&ಕಾಲೇಜ್ ಸಮಯಕ್ಕೆ ಸಮರ್ಪಕವಾಗಿ ಕಳುಹಿಸುವಲ್ಲಿ ವಿಫಲವಾಗಿದೆ. ವರ್ಷವಿಡಿ ವಿದ್ಯಾಥಿರ್ಗಳು ಬಸ್ಗಾಗಿ ಬಿದಿಗಿಳಿದು ಪ್ರತಿಭಟಿಸುವಂತಾಗುತ್ತಿದೆ. ಇದು ಶೈಕ್ಷಣಿಕ ಅಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಗ್ರಾಮದ ಕೆಲ ವಿದ್ಯಾಥಿರ್ ಮುಖಂಡರು ಅನೇಕ ಬಾರಿ ಮನವಿ ಪತ್ರಗಳನ್ನು ನೀಡಿದ್ದಾರೆ. ಆದರೂ ಘಟಕ ವ್ಯವಸ್ಥಾಪಕರು ಯಾವುದೆ ಬೇಡಿಕೆಗಳಿಗೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕೆ ಬಂದ ಬ್ಯಾಡಗಿ ಘಟಕ ವ್ಯವಸ್ಥಾಪಕ ರಾಮು ಪಾಟೀಲ ಮಾತನಾಡಿ, ಇನ್ಮುಂದೆ ಸರಿಯಾಗಿ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ವಿದ್ಯಾಥಿರ್ಗಳು ಪ್ರತಿಭಟನೆ ಹಿಂಪಡೆದರು.
ಪ್ರಮುಖರಾದ ಪುನೀತ ಬಣಗಾರ, ವಿನಾಯಕ ಬನ್ನಿಹಟ್ಟಿ, ಜೀವನ ಮಲ್ಲೂರು, ದರ್ಶನ ಮತ್ತೂರು, ಮಹೇಶ ಮೂಡಲಸೀಮಿ, ಚೇತನ ಕೆ., ಕಿರಣ ಎನ್., ನಿವೇದಿತಾ ಎಸ್., ಮೇಘನಾ ಆರ್.ಡಿ., ಹೇಮಾ ಯು.ಜಿ. ಮತ್ತಿತರರು ಪಾಲ್ಗೊಂಡಿದ್ದರು.