ಬೇಡಿಕೆ ಈಡೇರಿಕೆಗೆ ಪಟ್ಟು : ಕನಕಪುರ ಬಸ್ ನಿಲ್ದಾಣದಲ್ಲಿ ಸಾಂಕೇತಿಕವಾಗಿ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ

1 KKP 3
Published on

ಕನಕಪುರ : ಸರ್ಕಾರಿ ನೌಕರರಿಗೆ ನೀಡುವಂತೆ ನಮಗೂ ಸೌಲಭ್ಯ ನೀಡಿ ಎಂದು ಕನಕಪುರ ಕೆಎಸ್‌ಆರ್‌ಟಿಸಿ ನಿಲ್ದಾಣಾಧಿಕಾರಿ ಗುರಪ್ಪ ನೇತೃತ್ವದಲ್ಲಿ ಚಾಲಕ, ನಿರ್ವಾಹಕರು ಗುರುವಾರ ನಗರದ ಬಸ್ ನಿಲ್ದಾಣದಲ್ಲಿ ಸಾಂಕೇತಿಕವಾಗಿ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.

ನೌಕರರು ಮತ್ತವರ ಕುಟುಂಬ ಬೀದಿ ಪಾಲಾಗುತ್ತಿದ್ದು, ಇದುವರೆಗೂ ಆಳಿದ ಸರ್ಕಾರಗಳು ಮತ್ತು ಯೂನಿಯನ್ ಲೀಡರ್‌ಗಳು ನೌಕರರ ಹಿತ ಮರೆತಿದ್ದಾರೆ. ಇತ್ತೀಚೆಗೆ ಸಂಘಟನೆಗಳು ನೌಕರರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿವೆ ಎಂದು ಗುರಪ್ಪ ಹೇಳಿದರು.

ಆರನೇ ವೇತನ ಆಯೋಗ ಜಾರಿ, ಆರೋಗ್ಯ ವಿಮೆ, ಎನ್‌ಎಎನ್‌ಸಿ ಸಂಪೂರ್ಣ ರದ್ದು, ಅಂತರ್ ನಿಗಮ ವರ್ಗಾವಣೆ, ಸೇರಿ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಸಾರಿಗೆ ಮಂತ್ರಿಗಳು ಭರವಸೆ ನೀಡಿದ್ದು, ಕಾಲಾವಕಾಶ ಕೋರಿದ್ದರು. ಅವರು ನೀಡಿದ್ದ ಅವಧಿ ಮುಗಿದು 15 ದಿನ ಕಳೆದರೂ ಭರವಸೆ ಈಡೇರದ ಕಾರಣ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದರು.ಚಾಲಕ ಶಿವಕುಮಾರ್ ಮಾತನಾಡಿ, ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿದಿನ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ, ಇಂದು ಕಪ್ಪುಪಟ್ಟಿಯನ್ನು ತೋಲಿಗೆ ಕಟ್ಟಿ ಪ್ರತಿಭಟಿಸಿದ್ದೇವೆ.

ಇಂದಿನಿಂದ ಏ.6ರವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು.

ಸಿಬ್ಬಂದಿಗಳಾದ ನಾಗಪ್ಪಗಂಟಿ, ಕುಮಾರ್, ಶಿವಣ್ಣ, ತಹಶೀಲ್ದಾರ್, ಟಿ.ಎಚ್. ಶಿವ, ಪುಟ್ಟಸ್ವಾಮಿ, ಮಹದೇವ್, ಸಿದ್ದೇಶ್, ವಸಂತ್, ಜೋಗಿ, ಚಿನ್ನಗಿರೀಗೌಡ, ಹರೀಶ್ ಸೇರಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net