

ಪಂಜಾಬ್: ಇಲ್ಲಿನ ಬಟಿಂಡಾದಲ್ಲಿ ಬಸ್ವೊಂದು ಸೇತುವೆಗೆ ಬಿದ್ದ ಪರಿಣಾಮ ಬಸ್ನಲ್ಲಿದ್ದ ಪ್ರಯಾಣಿಕರಲ್ಲಿ 8 ಜನರು ಶುಕ್ರವಾರ ಬಲಿಯಾಗಿದ್ದಾರೆ.
ಐವರು ಸ್ಥಳದಲ್ಲಿಯೇ ಅಸುನಿಗಿದ್ದು, ಮೂವರು ಗಂಭೀರ ಗಾಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ 18 ಜನರು ಗಾಯಗೊಂಡಿದ್ದಾರೆ. ಎಲ್ಲರನ್ನೂ ಹತ್ತಿರದ ಶಹಿದ್ ಬಾಯಿ ಮಣಿಸಿಂಗ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸ್ಥಳೀಯ ಶಾಸಕ ಜಗ್ರೂಪ್ ಸಿಂಗ್ ಗಿಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಮತ್ತು ಗಾಯಳುಗಳ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಸಿವಿಲ್ ಸರ್ಜನ್ ಡಾ.ರಮಣದೀಪ್ ಸಿಂಗ್ಲಾ ಹೇಳಿದರು.
ಬಟಿಂಡಾದ ಜಿವಾನ್ ಸಿಂಗ್ ಗ್ರಾಮದ ಬಳಿ ಇರುವ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಸೇತುವೆಗೆ ಬಿದ್ದಿರುವ ಘಟನೆ ನಡೆದಿದೆ. ಅಲ್ಲದೆ, ಈ ಘಟನೆ ವೇಳೆ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಘಟನೆ ಸ್ಥಳದಲ್ಲಿ ಎನ್ಡಿಆರ್ಎಫ್ ತಂಡ ಮತ್ತು ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಕಾರ್ಯಚರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಇನ್ನು ಮೃತ ದೇಹಗಳು ಪತ್ತೆಯಾದರೂ ಜಿಲ್ಲಾಧಿಕಾರಿಗಳು ಅವರ ಹೆಸರು ಮತ್ತು ವಿಳಾಸ ಧೃಢಪಡಿಸಬೇಕಾಗಿದೆ. ಅಪಘಾತದ ಕಾರಣವನ್ನು ತಿಳಿಯಲು ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).