ಬಳ್ಳಾರಿಯಲ್ಲಿ ಭೀಕರ ಅಪಘಾತ: ಮೃತಪಟ್ಟ ಮೂವರು ವಿದ್ಯಾರ್ಥಿಗಳ ಹಿನ್ನೆಲೆ ಕೇಳಿದ್ರೆ ಕರುಳು ಚುರ್​ ಅನ್ನುತ್ತೆ…

death
Published on

ಬಳ್ಳಾರಿ: ಕೆಎಸ್​ಆರ್​ಟಿಸಿ ಬಸ್​ ಹರಿದು ಮೂವರು ವಿದ್ಯಾರ್ಥಿಗಳು ದುರಂತ ಅಂತ್ಯಕಂಡ ದುರ್ಘಟನೆ ಬಳ್ಳಾರಿ ತಾಲೂಕಿಮ ಹಲಕುಂದಿ ಗ್ರಾಮದ ಸಮೀಪ ನಿನ್ನೆ(ಭಾನುವಾರ) ರಾತ್ರಿ 2 ಗಂಟೆ ಸುಮಾರಿನಲ್ಲಿ ಸಂಭವಿದೆ. ಕಡುಬಡತನದಲ್ಲೇ ಹುಟ್ಟಿ ಬೆಳೆದ ಈ ಮಕ್ಕಳು ಓದುವ ಹಸಿವು ನೀಗಿಸಿಕೊಳ್ಳುವ ತವಕದಲ್ಲಿ ಪಾರ್ಟ್​ ಟೈಮ್​ ಕೆಲಸ ಮಾಡಲು ಹೋಗಿ ಬಾರದ ಲೋಕಕ್ಕೆ ಹೋಗಿದ್ದು ದುರಂತ.

ಎಮ್ಮಿಗನೂರಿನ ಕನಕರಾಜು(19), ಮುರುಡಿ ಗ್ರಾಮದ ಶಂಕರ(18), ಸಂಡೂರು ನಾಗೇನಹಳ್ಳಿಯ ಹೊನ್ನೂರ(22) ಮೃತ ದುರ್ದೈವಿಗಳು. ಇವರೆಲ್ಲರೂ ವಿದ್ಯಾಭ್ಯಾಸ ಮಾಡುತ್ತಾ ಬಳ್ಳಾರಿಯ ಎಸ್ಸಿ- ಎಸ್ಟಿ ಹಾಸ್ಟೆಲ್​ನಲ್ಲಿ ತಂಗಿದ್ದರು. ಬಡತನದಲ್ಲೂ ಓದಬೇಕು ಅಂತಾ ಹಂಬಲಿಸುತ್ತಿದ್ದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಖರ್ಚುವೆಚ್ಚಕ್ಕಾಗಿ ಹೊಟೇಲ್​ವೊಂದರಲ್ಲಿ ಕ್ಯಾಟರಿಂಗ್ ಸರ್ವಿಸ್ ಮಾಡಲು ಪಾರ್ಟ್​ ಟೈಮ್​ ಕೆಲಸಕ್ಕೆ ಸೇರಿದ್ದರು.

ಮೂವರು ಭಾನುವಾರ ರಾತ್ರಿ ಬಳ್ಳಾರಿ ಸಮೀಪದ ಹಲಕುಂದಿ ಬಳಿ ಕ್ಯಾಟರಿಂಗ್ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ವಾಪಸ್​ ಹಾಸ್ಟೆಲ್​ಗೆ ಬರುವಾಗ ಮಾರ್ಗಮಧ್ಯೆ ಸಾರಿಗೆ ಬಸ್​ ಡಿಕ್ಕಿ ಹೊಡೆದಿದೆ. ಬೆಂಗಳೂರಿನಿಂದ ಜೇವರ್ಗಿಗೆ ಹೊರಟಿದ್ದ ಜೇವರ್ಗಿ ಘಟಕದ ಸರ್ಕಾರಿ ಬಸ್ ಮೂವರ ಮೇಲೆ ಹರಿದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net