ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ, ಕೊಲೆಗೆ ಸಂಚು; ಸುಟ್ಟು ಕರಕಲಾದ ಬೈಕ್​ನಿಂದ BJP ನಾಯಕನ ಪತ್ನಿ ಪ್ಲ್ಯಾನ್​ ರಿವೀಲ್..Andhra Pradesh

ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ, ಕೊಲೆಗೆ ಸಂಚು; ಸುಟ್ಟು ಕರಕಲಾದ ಬೈಕ್​ನಿಂದ BJP ನಾಯಕನ ಪತ್ನಿ ಪ್ಲ್ಯಾನ್​ ರಿವೀಲ್..Andhra Pradesh
Published on: 
  • ಬೈಕ್​ ಸುಟ್ಟ ಹಿಂದಿನ ಕಾರಣ ತನಿಖೆ ನಡೆಸಿದ ಪೊಲೀಸರಿಗೆ ಸಿಕ್ತು ರೋಚಕ ಕಾರಣ

  • ಪ್ರಿಯಕರನ ಜೊತೆ ಸೇರಿ ಪತಿ ಕೊಲೆಗೆ ಸಂಚು ರೂಪಿಸಿದ್ದ ಪತ್ನಿ ಅರೆಸ್ಟ್

  • ಪತಿ ಎಲ್ಲಿರುತ್ತಾನೆ ಎನ್ನುವ ಲೈವ್ ಲೊಕೇಶನ್​ ಕಳುಹಿಸುತ್ತಿದ್ದ ಪತ್ನಿ, ತನಿಖೆಯಿಂದ ಬಯಲು

ತಿರುಪತಿ: ಬಿಜೆಪಿ ಮುಖಂಡರೊಬ್ಬರ ಕೊಲೆಗೆ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆಗೆ ರೂಪಿಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಬೈಕ್​ ಸುಟ್ಟ ವಿಚಾರಕ್ಕೆ ಶುರುವಾದ ತನಿಖೆಯು ಕೊಲೆಯ ಮಾಸ್ಟರ್​ ಪ್ಲ್ಯಾನ್​ ಅನ್ನು ಬಯಲು ಮಾಡಿತ್ತು.

ತಿರುಪತಿ ಜಿಲ್ಲೆಯ ಚಂದ್ರಗಿರಿ ವಲಯದಲ್ಲಿ ಈ ಘಟನೆ ನಡೆದಿದ್ದು, ಬಿಜೆಪಿ ನಾಯಕ ಮುನಿರಾಜ ಅವರ ಪತ್ನಿ ಪ್ರಶಾಂತಿ ಹಾಗೂ ಆಕೆಯ ಪ್ರಿಯಕರ ಸಾಯಿ ಸೇರಿದಂತೆ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಸೆ.13ರಂದು ಮಧ್ಯರಾತ್ರಿ ಬಿಜೆಪಿ ನಾಯಕ ಮುನಿರಾಜು ಅವರ ಬೈಕ್​ಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ಆ ಕಾರಣದಿಂದ ಅವರು ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದರು. ಆಸ್ತಿ ಹಾನಿ ಪ್ರಕರಣದಡಿ ತನಿಖೆ ನಡೆಸಿದ ಪೊಲೀಸರಿಗೆ ಕೊಲೆಯ ಸಂಚಿನ ಬಗ್ಗೆ ಮಾಹಿತಿ ಸಿಕ್ಕಿದೆ.

ಕೊಲೆಗೆ ಪತ್ನಿಯಿಂದಲೇ ಸಂಚು

ಮೊದಲಿಗೆ ದೂರು ದಾಖಲಿಸಿದ ಮುನಿರಾಜು ಬಿಜೆಪಿ ನಾಯಕನಾಗಿರುವ ಕಾರಣ ರಾಜಕೀಯ ದ್ವೇಷಿಗಳು ಇದಕ್ಕೆ ಕಾರಣರಾಗಿರಬಹುದು ಅಥವಾ ವಿನಾಯಕ ಚತುರ್ಥಿ ಹಬ್ಬದ ವಿಚಾರವಾಗಿ ನಡೆದಿರುವ ಗಲಾಟೆ ಎಂದು ಊಹಿಸಿದ್ದರು. ಆದರೆ, ಪೊಲೀಸರ ತನಿಖೆಗೆ ಈ ವಿಚಾರಗಳು ಸಹಾಯ ಮಾಡಲಿಲ್ಲ. ಪುರಾವೆಗಳು ಸಿಕ್ಕಿಲ್ಲ.

ಆ ಕಾರಣದಿಂದ ಸಿಸಿಟಿವಿ ಕ್ಯಾಮೆರಾಗಳು ಮತ್ತು ತಾಂತ್ರಿಕ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಬೈಕ್​ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ಸಿಕ್ಕಿಬಿದ್ದಿದ್ದಾರೆ. ಜೊತೆ ಪ್ರಶಾಂತಿ ಅವರ ಮೇಲಿನ ಅನುಮಾನದ ಮೇರೆಗೆ ಅವರ ಮೊಬೈಲ್​ ಚಾಟ್ ಇನ್​ಸ್ಟಾಗ್ರಾಮ್ ಪರಿಶೀಲನೆ ನಡೆಸಿದಾಗ ಪ್ರಕರಣ ಸೂತ್ರಧಾರರು ಯಾರು ಎನ್ನುವುದು ತಿಳಿದುಬಂದಿದೆ.

ಐವರು ಅರೆಸ್ಟ್

ಸಾಯಿ, ಉದಯ್ ಕಿರಣ್, ಲೀಲಾ ಕೃಷ್ಣ, ಪೃಥ್ವಿರಾಜ್ ಮತ್ತು ಹರೀಶ್ ಎಂಬ ಐದು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಈ ಕೃತ್ಯಕ್ಕೆ ಕಾರಣಕರ್ತರು ನಾವೇ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಹಲವಾರು ಬಾರಿ ದಾಳಿಗೆ ಯತ್ನ

ಮುನಿರಾಜು ಅವರ ಪತ್ನಿ ಪ್ರಶಾಂತಿ ಅವರನ್ನು ವಿಚಾರಣೆಗೆ ಪಡೆದಾಗ ಕೇಸ್​​ಗೆ ತಿರುವು ಸಿಕ್ಕಿತು. ಪೊಲೀಸರಿಂದ ವಶಕ್ಕೆ ಒಳಗಾದ ಸಾಯಿ ಜೊತೆಗೆ ಪ್ರಶಾಂತಿ ಇನ್​ಸ್ಟಾಗ್ರಾಮ್​ ಮೂಲಕ ಪರಿಚಯ ಮಾಡಿಕೊಂಡು ಜೊತೆಯಾಗಿದ್ದಳು. ಅವರಿಬ್ಬರಿಗೂ ಅಕ್ರಮ ಸಂಬಂಧವಿತ್ತು. ಸಾಯಿಗೆ ಮುನಿರಾಜು ಎಲ್ಲಿ ಪ್ರಯಾಣಿಸುತ್ತಿದ್ದಾರೆ. ಎಲ್ಲಿದ್ದಾರೆ ಎನ್ನುವ ಮಾಹಿತಿಯನ್ನು ಆಕೆ ನೀಡಿದ್ದಳು ಎನ್ನಲಾಗಿದೆ.

ಇಷ್ಟೇ ಅಲ್ಲದೇ ತನಿಖೆಯಲ್ಲಿ ಬಯಲಾದ ವಿಚಾರ ಎಂದರೆ, ಪ್ರಶಾಂತಿ ಮತ್ತು ಇತರ ಶಂಕಿತರು ಮುನಿರಾಜು ಮೇಲೆ ಹಲವಾರು ಬಾರಿ ದಾಳಿ ಮಾಡಲು ಯೋಜನೆ ಹಾಕಿಕೊಂಡಿದ್ದರು. ಆದರೆ ಅದನ್ನು ಕಾರ್ಯರೂಪಕ್ಕೆ ತರಲಾಗಲಿಲ್ಲ. ಕೊಲೆಗೆ ಕಾರಣ ಏನು ಎಂಬುದಕ್ಕೆ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪ್ರಶಾಂತಿ, ಸಾಯಿ, ಉದಯ್ ಕಿರಣ್, ಲೀಲಾ ಕೃಷ್ಣ, ಪೃಥ್ವಿರಾಜ್ ಮತ್ತು ಹರೀಶ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net