ಚುನಾವಣೆಗೂ ಮುನ್ನ ಬಿಹಾರ ಜನರಿಗೆ ಬಂಪರ್​ ಗಿಫ್ಟ್​: 125 ಯೂನಿಟ್​ವರೆಗೆ ಉಚಿತ ವಿದ್ಯುತ್ ಘೋಷಿಸಿದ ಸಿಎಂ! CM Nitish Kumar

nitishkumar
Published on

CM Nitish Kumar : ಬಿಹಾರ ಚುನಾವಣೆಗೂ ಮುನ್ನ, ಸಿಎಂ ನಿತೀಶ್ ಕುಮಾರ್​ ಜನರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಆಗಸ್ಟ್ 1ರಿಂದ ರಾಜ್ಯಾದ್ಯಂತ 125 ಯೂನಿಟ್​ವರೆಗೆ ಉಚಿತವಾಗಿ ವಿದ್ಯುತ್ (Free electricity up to 125 units) ನೀಡಲಾಗುವುದು ಎಂದು ಘೋಷಿಸಿದ್ದಾರೆ. ಈ ಯೋಜನೆಯು ಸುಮಾರು 1.67 ಕೋಟಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡಲಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಟ್ವೀಟ್​ ಮಾಡಿರುವ ಬಿಹಾರ ಸಿಎಂ ನಿತೀಶ್​ ಕುಮಾರ್​ 'ನಾವು ಮೊದಲಿನಿಂದಲೂ ಎಲ್ಲರಿಗೂ ಕೈಗೆಟುಕುವ ದರದಲ್ಲಿ ವಿದ್ಯುತ್​ ಒದಗಿಸುತ್ತಿದ್ದೇವೆ. ಈಗ ನಾವು ಆಗಸ್ಟ್​ 1 ರಿಂದ, ಅಂದರೆ ಜುಲೈ ಬಿಲ್​ನಿಂದಲೇ, ಬಿಹಾರ ರಾಜ್ಯದ ಎಲ್ಲಾ ಗೃಹಬಳಕೆದಾರರು 125 ಯೂನಿಟ್​ವರೆಗಿನ ವಿದ್ಯುತ್​ಗೆ ಯಾವುದೇ ಹಣವನ್ನು ಪಾವತಿಸಬೇಕಿಲ್ಲ ಎಂದು ನಿರ್ಧರಿಸಿದ್ದೇವೆ. ಇದು ರಾಜ್ಯದ 1.67 ಕೋಟಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತಾದೆ' ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ, ಮುಂದಿನ 3 ವರ್ಷಗಳಲ್ಲಿ ಎಲ್ಲ ದೇಶಿಯ ಗ್ರಾಹಕರ ಒಪ್ಪಿಗೆಯೊಂದಿಗೆ ಸೌರ ವಿದ್ಯುತ್​ ಸ್ಥಾವರ(Solar power plants) ಗಳನ್ನು ಜನರ ಮನೆಗಳ ಮೇಲ್ಛಾವಣಿ ಮೇಲೆ ಅಥವಾ ಹತ್ತಿರದ ಸಾರ್ವಜನಿಕ ಸ್ಥಳಗಳಲ್ಲಿ(public places) ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ ಎಂದು ನಿತೀಶ್​ ಕುಮಾರ್​ ಹೇಳಿದ್ದಾರೆ.

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ಚುನಾವಣೆ(Bihar election) ಗೂ ಮುನ್ನ ಮತದಾರರನ್ನು ಸೆಳೆಯುವ ಯೋಜನೆಯನ್ನು ನಿತೀಶ್​ ಕುಮಾರ್​ ಘೋಷಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net