Union Budget 2024 ; NDA ಮಿತ್ರಪಕ್ಷಗಳಿಗೆ ಮೋದಿ ಸರ್ಕಾರದಿಂದ ಬಂಪರ್​​ ಗಿಫ್ಟ್​​

Union Budget
Published on

ನವದೆಹಲಿ: ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಎನ್‌ಡಿಎ. ಸರ್ಕಾರ ಬಜೆಟ್‌ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುತ್ತಿದ್ದಾರೆ.

NDA ಮಿತ್ರಪಕ್ಷಗಳಿಗೆ ಮೋದಿ ಸರ್ಕಾರದಿಂದ ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ ಬಂಪರ್​ ಗಿಫ್ಟ್​​ ನೀಡಲಾಗಿದೆ. ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪೂರ್ವೋದಯ ಯೋಜನೆಯನ್ನು ಸಿದ್ದಪಡಿಸುವಿಕೆ

ವಿತ್ತಸಚಿವೆಯಾಗಿ ಲೋಕಸಭೆಯಲ್ಲಿ 7ನೇ ಬಜೆಟ್ ಮಂಡನೆ ಆರಂಭಿಸಿರುವ ನಿರ್ಮಲಾ ಸೀತಾರಾಮನ್​, NDA ಮಿತ್ರಪಕ್ಷಗಳಾಗಿರುವ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ವಿಶೇಷ ಮನ್ನಣೆ ನೀಡಿದ್ದಾರೆ. ರಸ್ತೆಗಳ ಅಭಿವೃದ್ಧಿಗೆ 26 ಸಾವಿರ ಕೋಡಿ ಮೀಸಲು, 21,400 ಕೋಟಿ ವೆಚ್ಚದಲ್ಲಿ ಬಿದ್ಯುತ್​ಚ್ಛಕ್ತಿ ಅಭಿವೃದ್ಧಿಗಾಗಿಯೆ ಇಡಲಾಗಿದೆ.

ಬಿಹಾರದ ಅಭಿವೃದ್ಧಿಗೆ ಯೋಜನೆ ಘೋಷಿಸಲಾಗಿದೆ. ಬಿಹಾರದಲ್ಲಿ ಹೊಸ ಏರ್​ಪೋರ್ಟ್​​, ಮೆಡಿಕಲ್​​ ಕಾಲೇಜುಗಳು ನಿರ್ಮಾಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಬಿಹಾರದಲ್ಲಿ ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಮಾಡುವ ಜತೆಗೆ ಬಿಹಾರದಲ್ಲಿ ಹೆಚ್ಚು ಹಣವನ್ನು ಹೋಡಿಕೆ ಮಾಡಲಾಗುತ್ತದೆ.

ಅಮೃತಸರ-ಕೋಲ್ಕತ್ತಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬಿಹಾರದ ಗಯಾದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ನಾವು ಬೆಂಬಲಿಸುತ್ತೇವೆ. ಇದು ಪೂರ್ವ ಭಾಗದ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಈಶಾನ್ಯ ರಾಜ್ಯಗಳಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ 100 ಕ್ಕೂ ಹೆಚ್ಚು ಶಾಖೆಗಳನ್ನು ಸ್ಥಾಪನೆ

ಆಂಧ್ರಪ್ರದೇಶಕ್ಕೆ ಪುನರ್​​ ನಿರ್ಮಾಣ ಮನವಿಗೆ ಅಸ್ತು ಅಂದಿದ್ದು, ಆಂಧ್ರಪ್ರದೇಶಕ್ಕೆ ವಿಶೇಷ ಅನುದಾನದ ಭರವಸೆ ನೀಡಲಾಗಿದೆ. ಆಂಧ್ರಕ್ಕೆ 15 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್​​ ಮೀಸಲು ಇಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net