ದೈವನರ್ತಕರಿಗೆ ಮಾಸಾಶನದ ಬದಲಿಗೆ ಉದ್ಯೋಗ ನೀಡಿ; ಮಾನವ ಶ್ರಮವನ್ನು ಬಳಸಿಕೊಳ್ಳುವ ಕೆಲಸ ಮಾಡಿ!

BTLN
Published on

ಗದಗ: ಯಾರ್ಯಾರೋ ದೇವರ ಹೆಸರಿನಲ್ಲಿ ಕುಣಿದರೆ ಅವರಿಗೆ ದುಡ್ಡು ಕೊಡುವ ಕೆಲಸ ಮಾಡಬಾರದು. ಇದಕ್ಕಾಗಿ ಸಾರ್ವಜನಿಕ ಹಣವನ್ನು ಪೋಲು ಮಾಡಬಾರದು. ದೈವದ ಹೆಸರಿನಲ್ಲಿ ನರ್ತನೆ ಮಾಡುವುದು ಆಕ್ರೋಶವಾಗಿದೆ. ಇಂತಹ ಸುಳ್ಳು ಸತ್ಯವನ್ನು ಜನರ ಮುಂದೆ ಇಡುವ ಕೆಲಸ ಮಾಡಬೇಕು. ದೈವನರ್ತಕರಿಗೆ ದುಡಿಮೆ ಮಾಡಿ, ಉಣ್ಣುವ ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಿ.ಟಿ ಲಲಿತಾ ನಾಯಕ್ ಮಾತನಾಡಿ, ಯಾವುದೇ ಕಾಲದಲ್ಲಿ ನೋವಿನಿಂದ ಕೂಗಿದವರನ್ನು ದೇವರೆಂದು ಕರೆದರು. ಈಗಿರುವ ಮನುಷ್ಯರೇ ದೇವರುಗಳು. ದೈವನರ್ತಕರಿಗೆ ಎರಡು ಸಾವಿರ ರೂಪಾಯಿ ಮಾಸಾಶನ ನೀಡುವ ಬದಲಿಗೆ ಉದ್ಯೋಗ ನೀಡಿ. ಅರ್ಚಕರು ಹಾಗೂ ಮೌಲ್ವಿಗಳಿಗೆ ಕೂಡಾ ಮಾಸಾಶನ ನೀಡಬಾರದು. ಸರ್ಕಾರ ಮಾನವ ಶ್ರಮವನ್ನು ಬಳಸಿಕೊಳ್ಳಬೇಕು. ಅದನ್ನು ಬಿಟ್ಟು ದೇವರು ನಾನೆಂದು ಕುಣಿದಾಗ, ಅದಕ್ಕೆ ಎರಡು ಸಾವಿರ ಕೊಟ್ಟರೆ ಅದು ಸಾಲುವುದಿಲ್ಲ. ಮುಂದೆ ಆತ ಮೌಡ್ಯವನ್ನು ಬಿತ್ತುತ್ತಾನೆ ಎಂದು ಹೇಳಿದರು.

ಅಲ್ಲದೇ, ದೇವಸ್ಥಾನದಲ್ಲಿ ನೀಡುವ ತೀರ್ಥವನ್ನು ಕುಡಿಯಬಾರದು. ಇದೊಂದು ವೈಜ್ಞಾನಿಕ ಪ್ರಕ್ರಿಯೆ. ತೀರ್ಥ ಕೊಡುವವರು ಶುದ್ಧವಾಗಿ ಕೈ ತೊಳೆಯುವುದಿಲ್ಲ. ಇದರಿಂದ ಎಷ್ಟೋ ಜನರು ವಾಂತಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿಕೆ ನೀಡಿದ್ದಾರೆ.

ಎಲ್ಲರ ಮನೆಯಲ್ಲಿಯೂ ನೀರು ಇದೆ. ಹೀಗಿದ್ದಾಗ ತೀರ್ಥ ಯಾಕೆ ಕುಡಿಯಬೇಕು. ಹೆಣ ಸುಟ್ಟು ಗಂಗಾ ನದಿಗೆ ಎಸೆಯುತ್ತಾರೆ. ಇದರಿಂದ ನದಿಯಲ್ಲಿ ಹೆಣಗಳು ತೇಲಿ ಬರುತ್ತವೆ. ಇಂತಹ ಜಲವನ್ನು ಗಂಗಾಜಲವೆಂದು ಯಾಕೆ ಕುಡಿಯಬೇಕು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net