ಯಡಿಯೂರಪ್ಪ ಅವರೇ ಸುಪ್ರೀಂ, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಬಿಜೆಪಿ ಸಭೆ ಬಳಿಕ ಘೋಷಣೆ

bsy
Published on

ಶಿವಮೊಗ್ಗ: ಸಿಎಂ ಬದಲಾವಣೆ ಮತ್ತು ಬಿಎಸ್​ವೈ ಸಂಪುಟ ಸರ್ಜರಿ ವಿಚಾರದಲ್ಲಿ ಅಂತೆ-ಕಂತೆ ಸುದ್ದಿಗಳೇ ಹೆಚ್ಚಾಗಿ ಸದ್ದು ಮಾಡುತ್ತಿವೆ. ಬಿಜೆಪಿ ಕಾರ್ಯಕಾರಿಣಿ ಸಭೆ ಮುಗಿದ ಬಳಿಕ ಬಿ.ಎಸ್​.ಯಡಿಯೂರಪ್ಪರ ಸಿಎಂ ಸ್ಥಾನಕ್ಕೆ ಕುತ್ತು ಬರಲಿದೆ ಎಂದು ಹರಡಿದ್ದ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. ಈ ಊಹಾಪೋಹಕ್ಕೆಲ್ಲ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತೆರೆ ಎಳೆದಿದ್ದಾರೆ.

ಬಿಜೆಪಿ ಕಾರ್ಯಕಾರಿಣಿ ಸಭೆ ಮುಗಿಯುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯೇ ಆಗಿಲ್ಲ. ಇದು ಸಿಎಂ ಯಡಿಯೂರಪ್ಪ ಅವರ ವಿವೇಚನೆಗೆ ಬಿಟ್ಟದ್ದು ಎಂದರು. ಇದನ್ನೂ ಓದಿರಿ ಎನ್​ಡಿಎ ಜತೆ ಜೆಡಿಎಸ್​ ವಿಲೀನ: ಬಿಜೆಪಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ ಸ್ಫೋಟ

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಲೀಡರ್​ಶಿಫ್ ಬದಲಾವಣೆ ಅನಗತ್ಯ ಚರ್ಚೆ. ಯಡಿಯೂರಪ್ಪ ಅವರೇ ರಾಜ್ಯದ ನಾಯಕರು, ಅವರೇ ಸಿಎಂ. ಪಕ್ಷದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಸಿಎಂ ಯಡಿಯೂರಪ್ಪ ಅವರೇ ಸುಪ್ರೀಂ, ಸಂಪುಟ ಸರ್ಜರಿ ಬಗ್ಗೆ ಅವರೇ ತೀರ್ಮಾನ ತೆಗೆದುಕೊಳ್ತಾರೆ ಎಂದು ಘೋಷಿಸಿದರು.

ಇನ್ನು ಯತ್ನಾಳ್​ ಹೇಳಿಕೆ ಬಗ್ಗೆ ಮಾತನಾಡಿದ ಅರುಣ್​ ಸಿಂಗ್​, Who is ಯತ್ನಾಳ್... ಯತ್ನಾಳ್ ಯಾರು? ಅವರ ಹೇಳಿಕೆ ಬಗ್ಗೆ ಕೇಂದ್ರ ಶಿಸ್ತು ಸಮಿತಿ ಗಮಹನಹರಿಸುತ್ತಿದೆ ಎಂದು ಗರಂ ಆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net