ತೃತೀಯಲಿಂಗಿ ನಾಯಕಿಯ ಬರ್ಬರ ಹತ್ಯೆ.. ನ್ಯಾಯಕ್ಕಾಗಿ ಆಸ್ಪತ್ರೆ ಎದುರು ಭಾರೀ ಪ್ರತಿಭಟನೆ | Murder

murder (3)
Published on

ಆಂಧ್ರಪ್ರದೇಶ: ಇಲ್ಲಿನ ಕೊಡವಲೂರು ಮಂಡಲದದಲ್ಲಿ ಮಂಗಳವಾರ ತಡರಾತ್ರಿ ತೃತೀಯಲಿಂಗಿ ಸಮುದಾಯದ ನಾಯಕಿಯೊಬ್ಬರನ್ನು ಬರ್ಬರವಾಗಿ ಕೊಲೆ(Murder) ಮಾಡಲಾಗಿದೆ ಎಂದು ವರದಿಯಾಗಿದೆ.

ಹತ್ಯೆಯಾಗಿರುವ ತೃತೀಯಲಿಂಗಿ ಹಾಸಿನಿ ಎಂದು ಗುರುತಿಸಲಾಗಿದೆ. ನೆಲ್ಲೂರು ಸರ್ಕಾರಿ ಜನರಲ್​ ಆಸ್ಪತ್ರೆಗೆ ಆಕೆಯ ಶವ ತರುವಾಗ ಭಾರಿ ಜನಸಂದಣಿ ಜಮಾಯಿಸಿತ್ತು. ಆಂಧ್ರ ನೆಲ್ಲೂರು ಸೇರಿದಂತೆ ತಮಿಳುನಾಡು ವಿವಿಧ ಭಾಗಗಳಿಂದ ತೃತೀಯಲಿಂಗಿಯ ಸಮುದಾಯದವರು ಆಸ್ಪತ್ರೆ ಮುಂದೆ ಧಾವಿಸಿದ್ದು, ಕೊಲೆಗೆ ನ್ಯಾಯ ಒದಗಿಸುವಂತೆ ಭಾರೀ ಪ್ರತಿಭಟನೆ ಮಾಡಲಾಗಿದೆ.ಪ್ರಸ್ತುತ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಲಾಗಿದೆ.

ಈ ಹಿನ್ನೆಯಲ್ಲಿ ಸ್ಥಳೀಯ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕಲು ಬಂದೋಬಸ್ತ್​ ಏರ್ಪಡಿಸಿದ್ದಾರೆ. ಇನ್ನು ತೃತೀಯಲಿಂಗಿ ಬಣದಲ್ಲಿನ ಅಧಿಕಾರಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಶೀಘ್ರವೇ ಕೊಲೆಗಾರರನ್ನು ಬಂಧಿಸಲಾಗುವುದು.  ಹಾಸಿನಿ ಅವರ ಮೃತ ದೇಹವನ್ನು ಅವರ ಹುಟ್ಟೂರು ತಿರುಪತಿ ಮಂಗಳಂಗೆ ಸಾಗಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net