ಪ್ರತಿ ಮನೆ ಮನೆಗೆ ಉಚಿತ ಮಟನ್ ವಿತರಣೆ! ಇದು ಹಬ್ಬದ ಕೊಡುಗೆ...Distributes Free Mutton To Houses

Distributes Free Mutton To Houses
Published on

ತೆಲಂಗಾಣ: (Distributes Free Mutton To Houses ) ಸಾಮಾನ್ಯವಾಗಿ ಚುನಾವಣೆಯ ಸಂದರ್ಭದಲ್ಲಿ ಮನೆ ಮನೆಗೆ ಗಿಫ್ಟ್​, ಮಾಂಸ, ಹಣ ಕಳುಹಿಸುವುದನ್ನು ನೋಡುತ್ತೇವೆ. ಮತದಾರರನ್ನು ಆಕರ್ಷಿಸಲು ಅವರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಕಳುಹಿಸುವುದು ಸಾಮಾನ್ಯವಾಗಿದೆ. ಆದರೆ ಸಂಕ್ರಾಂತಿ ಹಬ್ಬದಂದು ಮನೆ ಮನೆಗೂ ಬಿಆರ್ ಎಸ್ ನಾಯಕ ಪ್ರತಿ ಮನೆಗೂ ಸ್ಟೀಲ್ ಬಾಕ್ಸ್ ಕಳುಹಿಸಲಾಗಿತ್ತು. ಕನುಮ ಹಬ್ಬದಲ್ಲಿ ಮನೆಮನೆಗೆ ಕುರಿ ಮಾಂಸ ವಿತರಿಸಲಾಯಿತು. ಕುರಿ ಮಾಂಸವನ್ನು ಸ್ಟೀಲ್ ಬಾಕ್ಸ್ ನಲ್ಲಿಟ್ಟು ಮನೆ ಮನೆಗೆ ಹಂಚುತ್ತಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿವೆ.

ಸಂಗಾರೆಡ್ಡಿ ಜಿಲ್ಲೆಯ ಕೊಂಡಾಪುರ ಮಂಡಲದ ಗುಂತಪಲ್ಲಿ ಗ್ರಾಮದಲ್ಲಿ ಬಿಆರ್‌ಎಸ್ ಯುವ ಮುಖಂಡ ಪದಮತಿ ಅನಂತ ರೆಡ್ಡಿ ಅವರು ಕನುಮ ಹಬ್ಬದ ನಿಮಿತ್ತ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ಗ್ರಾಮದ ಪ್ರತಿ ಮನೆಗೆ ಸ್ಟೀಲ್ ಬಾಕ್ಸ್​​ಗಳಲ್ಲಿ ಉಚಿತವಾಗಿ ಮಟನ್ ವಿತರಿಸಿದ್ದಾರೆ. ಸುಮಾರು 400 ಕುಟುಂಬಗಳಿಗೆ ಮಟನ್ ಮತ್ತು ಇತರ 40 ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡಲಾಗಿದೆ.

ಈ ಹಿಂದೆಯೂ ಜನರ ಪರವಾಗಿ ನಿಂತು ಒಳ್ಳೆಯ ಹೆಸರು ಗಳಿಸಿದ್ದರು. ಕೋವಿಡ್ ಸಮಯದಲ್ಲಿ ಲಾಕ್‌ಡೌನ್‌ನಿಂದ ಜನರು ತೊಂದರೆ ಅನುಭವಿಸುತ್ತಿರುವಾಗ, ಅವರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ಅವರು ಮೆಚ್ಚುಗೆ ಪಡೆದಿದ್ದಾರೆ.

Mutton leg Soup

ತೆಲಂಗಾಣದಲ್ಲಿ ಕನುಮ ಹಬ್ಬದ ನಿಮಿತ್ತ ಬಿಜೆಪಿ ಹಾಗೂ ಕಾಂಗ್ರೆಸ್ ವಲಯದಿಂದಲೂ ಗ್ರಾಮದಲ್ಲಿ ಮಾಂಸಾಹಾರ ವಿತರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಗ್ರಾಮಸ್ಥರಿಗೆ ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳನ್ನು ಒದಗಿಸಿದ್ದರಿಂದ ಹಲವು ಕುಟುಂಬಗಳು ಸಂತಸ ವ್ಯಕ್ತಪಡಿಸಿದರು. ಹಬ್ಬದ ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಂಸಾಹಾರಕ್ಕೆ ಭಾರಿ ಬೇಡಿಕೆ ಇರುತ್ತದೆ. ಚಿಕನ್ ಸೆಂಟರ್‌ಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಖರೀದಿಸುತ್ತಿದ್ದಾರೆ. ಬಾಯ್ಲರ್ ಚಿಕನ್ ಬೆಲೆ 250 ರೂ.ಗಿಂತ ಹೆಚ್ಚಿದ್ದರೆ, ಕುರಿ, ನಾಟುಕೋಳಿ ಮಾಂಸಕ್ಕೆ ಭಾರಿ ಬೇಡಿಕೆ ಇದೆ. ಮಾರುಕಟ್ಟೆದಾರರು ಮುಂಚಿತವಾಗಿ ಕೋಳಿ ಮತ್ತು ಮೇಕೆಗಳನ್ನು ಸಿದ್ಧಪಡಿಸಿ ಜನರ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸಿದ್ದಾರೆ.

ಕನುಮ ಹಬ್ಬದ ದಿನ ಬಂಧು ಮಿತ್ರರೆಲ್ಲ ಸೇರಿ ಮಾಂಸಾಹಾರಿ ಖಾದ್ಯಗಳನ್ನು ಸವಿಯುವ ಮೂಲಕ ಎಲ್ಲರಲ್ಲೂ ಸಂತಸ ಮೂಡಿಸುತ್ತಾರೆ. ಹಬ್ಬದ ಅಂಗವಾಗಿ ಮಾಂಸಾಹಾರ ವಿತರಿಸಿ ಗ್ರಾಮಸ್ಥರೆಲ್ಲ ಸಂತಸ ಪಡುವಂತೆ ಮಾಡಿದ ಅನಂತ ರೆಡ್ಡಿ ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net