ಬ್ರೂಕ್ಲಿನ್ ಸೇತುವೆ

ವಿಜಯವಾಣಿ (4)
Published on

ತಂದೆ ಜಾನ್ ಅಗಸ್ಟಸ್ ರಾಬ್ಲಿಂಗ್ ಅವರ ಅಂತಿಮ ಆಸೆಯನ್ನು ನೇರವೇರಿಸಬೇಕೆಂದು, ಅವರ ಪುತ್ರ ವಾಷಿಂಗ್ಟನ್ ರಾಬ್ಲಿಂಗ್ ನಿರ್ವಣದ ಕಾರ್ಯವನ್ನು ಕೈಗೆತ್ತಿಕೊಳ್ಳಲು ತಯಾರಾದರು. ಆದರೆ ಅಲ್ಲಿಯ ಸರ್ಕಾರ ಮತ್ತೆ ತನ್ನ ನಿಲುವನ್ನು ಬದಲಾಯಿಸಿತು. ವಾಷಿಂಗ್ಟನ್ ಹಿಂದೆ ಸರಿಯಲಿಲ್ಲ. ತಾನು ಅದನ್ನು ಮುಗಿಸಿಕೊಡುತ್ತೇನೆ ಎಂಬ ವಿಶ್ವಾಸವನ್ನು ಸರ್ಕಾರಕ್ಕೆ ಮೂಡಿಸಿ, ಪುನಃ ಕಾರ್ಯವನ್ನು ಪ್ರಾರಂಭಿಸಿದರು.

ಸೇತುವೆ ನಿರ್ಮಾಣಕ್ಕೆಂದು ಸುಮಾರು 78 ಅಡಿ ಆಳದವರೆಗೆ ನದಿಯಲ್ಲಿ ಪಾಯಕ್ಕೆಂದು ಕೆಲಸಗಾರರು ಅಗೆಯಬೇಕಾಗಿತ್ತು. ಆ ಸಮಯದಲ್ಲಿ ಅನೇಕ ಕೆಲಸಗಾರರು ಗಾಳಿಯ ಕೊರತೆಯಿಂದಾಗಿ ಹಾಗೂ ಅನೇಕ ಕೊರತೆಗಳಿಂದಾಗಿ, ಕೇಸನ್ ರೋಗಕ್ಕೆ ಬಲಿಯಾದರು. ಅದರಿಂದ ಪಾರ್ಶ್ವವಾಯು, ಇನ್ನಿತರ ಕಾಯಿಲೆಗಳಿಗೆ ತುತ್ತಾದರು. ಅದರಲ್ಲಿ ವಾಷಿಂಗ್ಟನ್ ಕೂಡ ಒಬ್ಬ. ಈಗ ಪಾರ್ಶ್ವವಾಯು ವಿನಂದ ಬಳಲುತ್ತಿದ್ದ ವಾಷಿಂಗ್ಟನ್ ಮಾತಾಡಲು ಕೂಡ ಸಾಧ್ಯವಾಗಲಿಲ್ಲ. ಗಾಲಿ ಖುರ್ಚಿಯಲ್ಲಿ ಓಡಾಡುವ ಪರಿಸ್ಥಿತಿ ಅವರದಾಯಿತು.

ತನ್ನ ತಂದೆಯ ಕೊನೆಯ ಆಸೆಯನ್ನು ನೆರವೇರಿಸಲಾಗುತ್ತಿಲ್ಲವಲ್ಲ ಎಂದು ಬಹಳ ನೊಂದುಕೊಂಡರು. ಇದನ್ನರಿತ ಅವರ ಪತ್ನಿ ಎಮಲಿ ಯಾವುದೇ ತಾಂತ್ರಿಕ ವಿದ್ಯೆ, ಅನುಭವಗಳು ಇಲ್ಲದಿದ್ದರೂ ಕೇವಲ ಇಚ್ಛಾಶಕ್ತಿಯಿಂದ ಕೆಲಸವನ್ನು ಕೈಗೆತ್ತಿಕೊಂಡರು. ತನ್ನ ಪತಿಯ ಮಾತುಗಳನ್ನು, ಆಲೋಚನೆಗಳನ್ನು ಇತರ ಇಂಜಿನಿಯರುಗಳಿಗೆ ತಿಳಿಸಲು ಸಮರ್ಥರಾದರು. ಕ್ರಮೇಣ ನಿರ್ಮಾಣಕ್ಕೆ ಬೇಕಾಗಿದ್ದ ಎಲ್ಲ ಅಂಶಗಳನ್ನು ತಮ್ಮ ಪತಿಯ ಬಳಿ ಕಲಿತರು. ಹೀಗೆ ಸುಮಾರು 11 ವರ್ಷಗಳ ಕಾಲ ಈ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬ್ರೂಕ್ಲಿನ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವಲ್ಲಿ ತಮ್ಮ ಅಮೋಘ ಸೇವೆ ಸಲ್ಲಿಸಿದರು.

ಕೊನೆಗೂ ತಮ್ಮ ಮಾವ ಹಾಗೂ ಪತಿಯ ಬಯಕೆಯನ್ನು ಪೂರೈಸಿದರು. ಆ ಸೇತುವೆಯನ್ನು ನಿರ್ವಿುಸಿ ಪ್ರತಿನಿತ್ಯ ನೂರಾರು ಜನರು ಓಡಾಡುವುದಕ್ಕೆ ಅನುಕೂಲ ಮಾಡಿದರು. ಹೀಗೆ ಎಮಲಿ ಅವರ ಕಾರ್ಯದ ಮೂಲಕ ತಮ್ಮ ಮನೋದಾರ್ಢ್ಯವನ್ನು ನಮಗೆ ತೋರಿಸಿ ಆದರ್ಶ ವ್ಯಕ್ತಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net