ಕೈ ಮುರಿದು 7 ದಿನವಾದ್ರೂ ದೊರೆಯದ ಚಿಕಿತ್ಸೆ

hospital
ಚಿಕ್ಕಮುನಿಯಪ್ಪ, ಎಕ್ಸ್​ ರೇ
Published on

ಕೋಲಾರ: ಕೈ ಮುರಿದು ಚಿಕಿತ್ಸೆಗೆಂದು ನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿ ವಾರ ಕಳೆದರೂ ಸಹ ಸಮರ್ಪಕ ಚಿಕಿತ್ಸೆ ನೀಡುವಲ್ಲಿ ವೈದ್ಯರು ವಿಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹಸು ಗುದ್ದಿ ಕೈ ಮುರಿದುಕೊಂಡ ವೃದ್ಧರೊಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ ವಾರವಾದರೂ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಇದನ್ನ ಮನಗಂಡ ಮಗ ನಾಗೇಶ್​ ರ್ಜಮಿನಿಯಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ನೋವು ತೊಡಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿಕ್ಕಮುನಿಯಪ್ಪ ಎಂಬುವರು ಕೈ ಮುರಿತದಿಂದ ಮೊದಲು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚುವರಿ ಚಿಕಿತ್ಸೆಗಾಗಿ ಅಲ್ಲಿನ ವೈದ್ಯರು ಎಸ್​ಎನ್​ಆರ್​ ಆಸ್ಪತ್ರೆಗೆ ಹೋಗುವಂತೆ ಶಿಾರಸು ಮಾಡಿದ್ದಾರೆ. ಅದರಂತೆ ಚಿಕ್ಕಮುನಿಯಪ್ಪ ಕೋಲಾರ ಆಸ್ಪತ್ರೆಗೆ ದಾಖಲಾಗಿದ್ದು, 7 ದಿನ ಕಳೆದರೂ ಚಿಕಿತ್ಸೆ ಲಭಿಸಿಲ್ಲ. ಇನ್ನು ಚಿಕ್ಕಮುನಿಯಪ್ಪ ಅವರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ವೈದ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಲಂಚ ಕೊಟ್ಟಿಲ್ಲ ಎಂದು ತಮ್ಮ ತಂದೆಗೆ ಚಿಕಿತ್ಸೆ ನೀಡಿಲ್ಲ ಎಂದು ನಾಗೇಶ್​ ಆರೋಪಿಸಿದ್ದಾರೆ.

ಇನ್ನು ನಾಗೇಶ್​ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗುತ್ತ್ತಿದ್ದಂತೆ ಕೋಲಾರ ಜಿಲ್ಲಾಸ್ಪತ್ರೆ ವೈದ್ಯ ಡಾ.ಪ್ರದಿಪ್​ ಅವರು ಚಿಕ್ಕಮುನಿಯಪ್ಪಗೆ ಸರ್ಜರಿ ಮಾಡಿದ್ದಾರೆ. "ನಾವು ಬಂದು 7 ದಿನ ಆಯ್ತು , ನಿತ್ಯ ವೈದ್ಯರು ಬಂದು ಇವತ್ತು ನಾಳೆ ಎಂದು ಸಬೂಬು ಹೇಳಿಕೊಂಡೇ ಕಾಲ ಕಳೆದಿದ್ದಾರೆ. ನಮಗಿಂತ ಹಿಂದೆ ಬಂದವರೆಲ್ಲ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ವಾಪಸ್​ ಮನೆಗೆ ತೆರಳಿದ್ದಾರೆ. ಆದರೆ ನಮಗೆ ತಡ ಯಾಕೆ ಮಾಡಿದರು ಎಂದು ಅರ್ಥವಾಗುತ್ತಿಲ್ಲ' ಎಂದು ವೃದ್ಧನ ಪತ್ನಿ ಲಕ್ಷ್ಮಮ್ಮ ನೋವು ತೊಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net