ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ 2 ಜಿ ವೇಗದ ಇಂಟರ್​ನೆಟ್​, ಬ್ರಾಡ್​ಬ್ಯಾಂಡ್​ ಸೇವೆ ಮರು ಆರಂಭ

jammu 5 mar 20
Published on

ಶ್ರೀನಗರ: ಅಂದಾಜು 7 ತಿಂಗಳ ಬಳಿಕ ಕಣಿವೆ ರಾಜ್ಯದಲ್ಲಿ ಸ್ಥಗಿತಗೊಂಡಿದ ಇಂಟರ್​ನೆಟ್​ ಹಾಗೂ ಬ್ರಾಡ್​ಬ್ಯಾಂಡ್​ ಸೇವೆಯನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ಗುರುವಾರದಿಂದ ಮರು ಆರಂಭಿಸಿದೆ.

ಕಳೆದ ವರ್ಷ ಆ.5ರಂದು ಕಣಿವೆ ರಾಜ್ಯಕ್ಕೆ ಸಂವಿಧಾನದಲ್ಲಿ ವಿಶೇಷ ಅಧಿಕಾರ ನೀಡುವ 370ನೇ ವಿಧಿ ರದ್ದುಗೊಳಿಸಿದ ನಂತರ ಇಂಟರ್​ನೆಟ್​ ಹಾಗೂ ಬ್ರಾಡ್​ಬ್ಯಾಂಡ್​ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಕಣಿವೆ ರಾಜ್ಯದಲ್ಲಿ 2ನೇ ತಲೆಮಾರಿನ ತರಂಗಳ ವೇಗ (2ಜಿ ಸ್ಪೀಡ್​) ಹೊಂದಿರುವ ಇಂಟರ್​ನೆಟ್​ ಸೌಲಭ್ಯವನ್ನು ಒದಗಿಸಲು ಜಮ್ಮು ಮತ್ತು ಕಾಶ್ಮೀರ ಆಡಳಿತ ನಿರ್ಧರಿಸಿ ಮಾ. 4ರಂದು ಸುತ್ತೊಲೆ ಹೊರಡಿಸಿದೆ.

ಕಣಿವೆ ರಾಜ್ಯದಲ್ಲಿ ಇಂಟರ್​ನೆಟ್​ ಸೌಲಭ್ಯವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕೆಲವರು ಸುಪ್ರೀಂಕೊರ್ಟ್​ ಮೆಟ್ಟಿಲೇರಿದ್ದರು. ಕೋರ್ಟ್​ ವಿಚಾರಣೆ ನಡೆಸಿ ಅಂತರ್ಜಾಲ ಸೌಲಭ್ಯ ಬಳಕೆ ಮನುಷ್ಯರ ಮೂಲಭೂತ ಹಕ್ಕು ಇದನ್ನು ಕಸಿಯುವಂತಿಲ್ಲ ಎಂದು ತೀರ್ಪು ನೀಡಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net