

ಮ್ಯಾಡ್ರಿಡ್: ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೆಚ್ಚು ಚಂದದಾರರನ್ನು ಪಡೆಯಲು ಹಾಗೂ ಶೇರ್ ಮಾಡುವ ವಿಡಿಯೋ ಅತಿ ಹೆಚ್ಚು ವೈರಲ್ ಆಗಲೆಂದು ಜನರ ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಪ್ರಸ್ತುತ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿರುವ ಈ ಒಂದು ವಿಡಿಯೋ ನೆಟ್ಟಿಗರನ್ನು ಕೆರಳುವಂತೆ ಮಾಡಿದೆ.
ವಿಡಿಯೋ ಆರಂಭದಲ್ಲಿ ಬ್ರಿಟಿಷ್ ಮಹಿಳೆ ಕ್ಲೋಯ್ ಲೋಪೆಜ್ ಸೂಪರ್ಮಾರ್ಕೆಟ್ನಲ್ಲಿ ಬ್ರೆಡ್ಗಳು ಇರುವ ಜಾಗದಲ್ಲಿ ನಿಂತಿದ್ದಾಳೆ. ಬಳಿಕ ಆಕೆ ತನ್ನ ಒಳಉಡುಪನ್ನು ತೆಗೆದು ಬ್ರೆಡ್ ಇಟ್ಟಿರುವ ಟ್ರೇನಲ್ಲಿ ಹಾಕುತ್ತಾಳೆ. ಬಳಿಕ ಕ್ಯಾಮೆರಾ ನೋಡಿ ನಗುತ್ತಾ ಟ್ರಾಲಿಯನ್ನು ಹಿಡಿದು ಮುಂದಕ್ಕೆ ಸಾಗುವುದನ್ನು ಕಾಣಬಹುದಾಗಿದೆ. ಈ ಘಟನೆಯು ಮರ್ಕಡೋನಾ ಸೂಪರ್ ಮಾರ್ಕೆಟ್ನಲ್ಲಿ ನಡೆದಿದೆ ಎಂದು ಸ್ಪ್ಯಾನಿಷ್ ಸುದ್ದಿವಾಹಿನಿಯಾದ ಲಾ ರಝೋನ್ನಲ್ಲಿ ವರದಿಯಾಗಿದೆ.
ಕ್ಲೋಯರ್ ಲೋಪೆಚ್ ಪೋಸ್ಟ್ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇರೆಯವರ ಆರೋಗ್ಯವನ್ನು ಅಪಾಯಕ್ಕೆ ತಳ್ಳುವ ಈ ಅಸಹ್ಯಕರ ಕೆಲಸ ಮಾಡುವುದನ್ನು ನಿಲ್ಲಿಸಬೇಕು, ನಿಮಗೆ ಸ್ವಾಭಿಮಾನ ಇಲ್ಲವೆ, ನೀವು ಶೀಘ್ರ ಜೈಲಿಗೆ ಹೋಗುತ್ತೀರಿ, ಇದು ಅಸಹ್ಯಕರ ಹಾಗೂ ಅಪಾಯಕಾರಿಯಾಗಿದೆ. ಗಂಭೀರ ಕಾಯಿಲೆಗೆ ಕಾರಣವಾಗಬಹುದು, ಈ ಬೇಜವಾಬ್ದಾರಿ ನಡವಳಿಕೆಯ ಮತ್ತೊಬ್ಬರ ಆರೋಗ್ಯ ಮತ್ತು ಸುರಕ್ಷರೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಅಂದ್ಹಾಗೆ ಲೋಪೆಚ್ ಈ ರೀತಿಯ ವಿಡಿಯೋ ಮಾಡುತ್ತಿರುವುದು ಇದೆ ಮೊದಲೆನಲ್ಲ. ಆಕೆಯ ಇನ್‌ಸ್ಟಾಗ್ರಾಮ್ ನೋಡಿದರೆ ಇನ್ನೊಂದು ವಿಡಿಯೋದಲ್ಲಿ ತನ್ನ ಒಳಉಡುಪನ್ನು ತೆಗೆದು ಹಾಲಿನ ಪೆಟ್ಟಿಗೆ ಮೇಲೆ ಇಡುವುದನ್ನು ತೋರಿಸುತ್ತದೆ. ಈ ವಿಡಿಯೋ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಜನರು ತಮ್ಮ ಪ್ರತಿಕ್ರಿಯೆಯನ್ನು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)