ಬ್ರಿಟನ್ ಪ್ರಧಾನಿಯ ವಿಭಿನ್ನ ಕೃತಜ್ಞತೆ

sudina 1
Published on

ನವದೆಹಲಿ: ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಬಗ್ಗೆ ಕೃತಜ್ಞತಾಭಾವ ಇದ್ದರೆ ವಿವಿಧ ರೀತಿಯಲ್ಲಿ ಪ್ರಕಟಿಸುವುದುಂಟು. ಬ್ರಿಟನ್​ನ ಪ್ರಧಾನಿ ಬೋರಿಸ್ ಜಾನ್ಸನ್ ತಮಗೆ ವೈದ್ಯಕೀಯ ಸೇವೆ ನೀಡಿದ ವೈದ್ಯರ ಹೆಸರನ್ನು ತಮ್ಮ ನವಜಾತ ಶಿಶುವಿಗೆ ಇಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಅವರು ಮಗುವಿಗೆ ವಿಲ್ಪ್ರೆಡ್ ಲಾರಿ ನಿಕೊಲಸ್ ಜಾನ್ಸನ್ ಎಂದು ಹೆಸರಿಟ್ಟಿದ್ದಾರೆ.

‘ವಿಲ್ಪ್ರೆಡ್ ಎಂದರೆ ಬೋರಿಸ್​ರ ಅಜ್ಜನ ಹೆಸರು; ಲಾರಿ ಎಂಬುದು ಬೋರಿಸ್​ರ ಪತ್ನಿಯ ಅಜ್ಜನ ಹೆಸರು, ನಿಕೊಲಸ್ ಎಂದರೆ ಕಳೆದ ತಿಂಗಳು ಬೋರಿಸ್​ರ ಜೀವವನ್ನು ಉಳಿಸಿರುವ ಇಬ್ಬರು ವೈದ್ಯರಾದ ಡಾ. ನಿಕ್ ಪ್ರೆ ೖಸ್ ಹಾಗೂ ಡಾ. ನಿಕ್ ಹಾರ್ಟ್ ಅವರ ಹೆಸರು’ ಎಂದು ವಿವರಿಸುತ್ತಾರೆ ಬೋರಿಸ್ ಪತ್ನಿ ಕಾರಿ ಸೈಮಂಡ್ಸ್.

ಮಾರ್ಚ್ 26ರಂದು ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಬೋರಿಸ್ ಇಪ್ಪತ್ತು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಪೂರ್ಣ ಚೇತರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net