ಬೃಂದಾವನದ ಸಂಗೀತ ಕಾರಂಜಿ ತಾತ್ಕಾಲಿಕ ಬಂದ್

Published on

ಕೆ.ಆರ್.ಸಾಗರ: ಕೃಷ್ಣರಾಜಸಾಗರ ಅಣೆಕಟ್ಟೆಗೆ ಹಾರಂಗಿ ಮತ್ತು ಹೇಮಾವತಿ ಅಣೆಕಟ್ಟೆಯಿಂದ ಹೆಚ್ಚಿನ ಹೊರಹರಿವು ಬಿಟ್ಟಿರುವ ಹಿನ್ನೆಲೆಯಲ್ಲಿ ಭದ್ತೆತೆಯ ದೃಷ್ಟಿಯಿಂದ ಬೃಂದಾವನದ ಸಂಗೀತ ಕಾರಂಜಿಯನ್ನು ತಾತ್ಕಾಲಿಕ ಬಂದ್ ಮಾಡಲಾಗಿದೆ.

ಕೆ.ಆರ್.ಸಾಗರ ಅಣೆಕಟ್ಟೆಯ ನೀರಿನ ಮಟ್ಟ 120.90 ಅಡಿ ಇದ್ದು, ಒಳಹರಿವು 45 ಸಾವಿರ ಕ್ಯೂಸೆಕ್ ಇದ್ದು ಅಣೆಕಟ್ಟೆ ನೀರಿನ ಸಂಗ್ರಹದ ದೃಷ್ಟಿಯಿಂದ 45 ಸಾವಿರ ಕ್ಯೂಸೆಕ್ ಬಿಟ್ಟಿರುವ ಹಿನ್ನೆಲೆಯಲ್ಲಿ ವಿಶ್ವಪ್ರಖ್ಯಾತ ಕೃಷ್ಣರಾಜಸಾಗರದ ಬೃಂದಾವನದಲ್ಲಿನ ಉತ್ತರ ಬೃಂದಾವನಕ್ಕೆ ಹೋಗುವ ಪಾದಚಾರಿ ಮಾರ್ಗ ನದಿ ನೀರಿನಲ್ಲಿ ಮುಳಗಡೆಯಾಗಿದೆ. ಇನ್ನೂ ಹೆಚ್ಚು ನೀರು ಹೊರ ಬಿಡುವ ಸಾಧ್ಯತೆ ಇರುವುದರಿಂದ ಸಂಗೀತ ಕಾರಂಜಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಉತ್ತರ ಬೃಂದಾವನಕ್ಕೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಮಾಡಿದ್ದು, ಇದರಿಂದ ಸಂಗೀತ ಕಾರಂಜಿ ಬಂದ್ ಆಗಿದ್ದು ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ನಿರಾಸೆ ಉಂಟಾಗಿದೆ. ಇನ್ನು ಪ್ರವಾಸೋದ್ಯಮ ಇಲಾಖೆ ನಡೆಸುವ ದೋಣಿ ವಿಹಾರ ಕೇಂದ್ರ ಕೂಡ ಸ್ಥಗಿತಗೊಂಡಿದೆ.

ಕೃಷ್ಣರಾಜಸಾಗರ ಅಣೆಕಟ್ಟೆಯಿಂದ 45 ಸಾವಿರಕ್ಕೂ ಹೆಚ್ಚು ಹೊರಹರಿವು ಹಿನ್ನೆಲೆಯಲ್ಲಿ ವಿಶ್ವಪ್ರಖ್ಯಾತ ಬೃಂದಾವನದಲ್ಲಿನ ಉತ್ತರ ಬೃಂದಾವನಕ್ಕೆ(ಸಂಗೀತ ಕಾರಂಜಿ) ಹೋಗುವ ಪಾದಚಾರಿ ಮಾರ್ಗ ನದಿ ನೀರಿನಲ್ಲಿ ಮುಳುಗಡೆಯಾಗಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net