ಬೃಂದಾವನ ರಸ್ತೆ ಟೋಲ್ ಮುಕ್ತ

05-05-25--krs1 (1) (1)
ಕೆ.ಆರ್.ಸಾಗರ ಬೃಂದಾವನದ ್ತ ಟೊಲ್ ಬಂದ್ ಮಾಡಿರುವ ಮಾಡಿರುವ ಚಿತ್ರ್ರ.
Published on

ಕೆ.ಆರ್.ಸಾಗರ : ಎರಡು ದಿನಗಳಿಂದ ಕೆ.ಆರ್.ಸಾಗರದ ಬೃಂದಾವನ ರಸ್ತೆಯಲ್ಲಿರುವ ವಾಹನ ಸಂಚಾರದ ಶುಲ್ಕ ವಸೂಲಿ ಮಾಡುವ ಟೋಲ್ ಬಂದ್ ಮಾಡಿದ್ದು, ಎಲ್ಲ ವಾಹನಗಳು ಯಾವುದೇ ಶುಲ್ಕವಿಲ್ಲದ ಸಂಚಾರ ಮಾಡುತ್ತಿವೆ. ಬೃಂದಾವನಕ್ಕೆ ಬರುವ ಪ್ರವಾಸಿ ವಾಹನಗಳೀಗ ವಾಹನ ನಿಲ್ದಾಣ ಶುಲ್ಕ ಮುಕ್ತವಾಗಿದೆ.

ಯಾವುದೇ ಸಾರ್ವಜನಿಕ ಪ್ರಕಟಣೆ ಹಾಗೂ ಮಾಹಿತಿ ನೀಡದೆ ಅಕ್ರಮವಾಗಿ ಕೆ.ಆರ್.ಸಾಗರ ದ ವಿಶ್ವ ವಿಖ್ಯಾತ ಬೃಂದಾವನದ ಪ್ರವೇಶ ದರವನ್ನು ಮೇ 1 ರಿಂದ ದುಪ್ಪಟ್ಟು ಮಾಡಿರುವುದು ಅಕ್ರಮವಾಗಿದೆ. ಯಾವುದೇ ಕರಾರು ಪತ್ರ ಮಾಡಿಕೊಳ್ಳದೆ ಖಾಸಗಿಯವರಿಂದ ಹಣ ವಸೂಲಿ ಮಾಡಿಸಲಾಗುತ್ತಿದ್ದು ಕಾ.ನೀ.ನಿಗಮ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ನಾಲ್ವರ ವಿರುದ್ಧ ನಾರ್ತ್‌ಬ್ಯಾಂಕ್ ಜಗದೀಶ್ ಎಂಬುವರು ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ಕುರಿತು ನಂ.1 ಕನ್ನಡ ದಿನಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು. ಇದನ್ನು ಕಂಡ ಸಾರ್ವಜನಿಕರು ಟೋಲ್ ನೀಡಲು ನಿರಾಕರಿಸಿದ್ದರು. ಅಲ್ಲದೇ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪತ್ರ ಬರೆದಿರುವ ಬಗ್ಗೆ ಪ್ರಸ್ತಾಪಿಸಿ ಟೋಲ್‌ನಲ್ಲಿದ್ದ ಕೆಸಿಐಸಿ ಕಂಪನಿಯ ಸಿಬ್ಬಂದಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ಸಾರ್ವಜನಿಕರು ಮತ್ತು ವಾಹನ ಚಾಲಕರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಟೋಲ್ ಬಂದ್ ಎರಡು ಮಾಡಿದ್ದು, ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಬೃಂದಾವನಕ್ಕೆ ಬರುವ ವಾಹನಗಳ ಪಾರ್ಕಿಂಗ್ ಶುಲ್ಕ ಮತ್ತು ಸೇತುವೆ ಬಳಕೆ ಶುಲ್ಕವನ್ನು ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಟೋಲ್ ಬಂದ್ ಮಾಡಿ ಮುಕ್ತವಾಗಿಸಲಾಗಿದೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಮಂಗಳವಾರ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೆಸಿಐಸಿ ಕಂಪನಿಗೆ ಬೃಂದಾವನ ಪ್ರವೇಶದರ, ಪಾರ್ಕಿಂಗ್ ಮತ್ತು ಸೇತುವೆ ಶುಲ್ಕ ವಸೂಲಿ ಮಾಡಲು ಟೆಂಡರ್ ನೀಡಲಾಗಿದೆ. ಇದರ ಕರಾರು ಕೂಡ ಆಗಿದೆ.

ಫಾರೂಕ್ ಅಭು

ಸಹಾಯಕ ಕಾರ್ಯಪಾಲಕ ಇಂಜಿನಿಯರ್(ನಿರ್ವಹಣೆ ವಿಭಾಗ), ಕಾ.ನೀ.ನಿಗಮ ಕೆ.ಆರ್.ಸಾಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net