ಮಳೆಹಾನಿ ಪರಿಶೀಲನೆಗೆ ತೆರಳಿದ್ದ ಶಾಸಕರ ಕಣ್ಣೆದುರೇ ಕುಸಿದು ಬಿದ್ದ ಸೇತುವೆ; ಇಬ್ಬರಿಗೆ ಗಾಯ

MLA 28 Sept 20
Published on

ರಾಯಚೂರು: ಮಳೆ ಹಾನಿ ಪರಿಶೀಲನೆಗೆಂದು ಹೋದ ಶಾಸಕರ ಕಣ್ಣೆದುರೇ ಸೇತುವೆ ಕುಸಿದು ಬಿದ್ದು, ಇಬ್ಬರು ಗಾಯಗೊಂಡ ಘಟನೆ ಸಿರವಾರ ತಾಲೂಕಿನ ನುಗಡೋಣಿ ಹೊಸೂರಿನಲ್ಲಿ ನಡೆದಿದೆ.

ಸತತ ಮಳೆ ಸುರಿಯುತ್ತಿರುವ ಕಾರಣ ಈ ಸೇತುವೆ ಸೆಪ್ಟೆಂಬರ್​ 26ರಂದು ಅರ್ಧ ಕುಸಿದಿತ್ತು. ಇಂದು ಮಾನ್ವಿ ಶಾಸಕ ವೆಂಕಟಪ್ಪ ನಾಯಕ್​ ಮಳೆ ಹಾನಿ ಪರಿಶೀಲನೆಗೆಂದು ಗ್ರಾಮಕ್ಕೆ ಬಂದಿದ್ದರು. ಇದೇ ವೇಳೆ ಆ ಸೇತುವೆ ಕುಸಿದುಬಿದ್ದಿದೆ. ಗ್ರಾಮಸ್ಥರಾದ ಹನುಮಂತ ಹಾಗೂ ಶಿವರಾಮರೆಡ್ಡಿ ಎಂಬುವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಶಾಸಕರು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದಾರೆ. ಸೇತುವೆ ಮೊದಲೇ ಕುಸಿದು ದುರ್ಬಲವಾಗಿತ್ತು. ಇಂದು ಶಾಸಕರು ಬಂದಿದ್ದಾರೆಂದು ಅನೇಕರು ಬಂದು ಸೇರಿದ್ದರಿಂದ ಭಾರ ಹೆಚ್ಚಿ ಬಿದ್ದಿದೆ ಎಂಬ ಅಭಿಪ್ರಾಯವ್ಯಕ್ತವಾಗಿದೆ.

ಸಿರಿವಾರದಿಂದ ನುಗಡೋಣಿ ಹೊಸೂರಿಗೆ ಸಂಪರ್ಕ ಕಲ್ಪಿಸುವ ಏಕೈಕ ಸೇತುವೆ ಇದಾಗಿದ್ದರಿಂದ ಸದ್ಯ ಮಾರ್ಗ ಬಂದ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net