ನಿರಂತರ ಮಳೆಯಿಂದಾಗಿ ಕುಸಿದ ಸೇತುವೆ; 11 ಮಂದಿ ಸಾವು, 30ಕ್ಕೂ ಹೆಚ್ಚು ಜನ ನಾಪತ್ತೆ

Bridge Collapse
Published on

ನವದೆಹಲಿ: ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಮೂಲಭೂತ ಸೌಕರ್ಯಕ್ಕೆ ಹೆಸರುವಾಸಿಯಾಗಿರುವ ಚೀನಾದಲ್ಲಿ ಕಳೆದ ಕೆಲ ದಿನಗಳಿಂದ ಮಳೆರಾಯ ಆರ್ಭಟಿಸುತ್ತಿದ್ದು, ಇದೀಗ ನಿರಂತರ ಮಳೆಯಿಂದಾಗಿ ಸೇತುವೆಯೊಂದು ಕುಸಿದು 11 ಮಂದಿ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಕಾಣೆಯಾಗಿರುವ ಘಟನೆ ಉತ್ತರ ಚೀನಾದ ಶಾಂಕ್ಸಿಯ ಶಾಂಗ್ಲುವೋದಲ್ಲಿ ನಡೆದಿದೆ.

ಶಾಂಕ್ಸಿ ಪ್ರಾಂತ್ಯದ ಶಾಂಗ್ಲುವೊದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕುಸಿದು ಬಿದ್ದಿದ್ದು, 20 ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಕಾಣೆಯಾದವರಿಗೆ ಹುಡುಕಾಟ ನಡೆಸಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಯೊಬ್ಬರು, ನಿರಂತರ ಮಳೆಯಿಂದಾಗಿ ಸೇತುವೆಯೂ ಶುಕ್ರವಾರ (ಜುಲೈ 19) ಸೇತುವೆ ಕುಸಿದಿದ್ದು, ಘಟನೆಯಲ್ಲಿ 11ಮಂದಿ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಕಾರುಗಳು ಕೊಚ್ಚಿ ಹೋಗಿದ್ದು, 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಕೊಚ್ಚಿ ಹೋಗಿದ್ದ ಕಾರುಗಳನ್ನು ಹೊರತೆಗೆಯಲಾಗಿದ್ದು, ಕಾಣೆಯಾದವರಿಗಾಗಿ ಹುಡುಕಾಟ ಮುಂದುಬರೆದಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net