ಮೊದಲ ರಾತ್ರಿಯಂದು ಗಂಡನಿಗೆ Beer, ಗಾಂಜಾ ತಂದುಕೊಡುವಂತೆ ಬೇಡಿಕೆ ಇಟ್ಟ ಪತ್ನಿ; ಮುಂದಾಗಿದ್ದು ಮಾತ್ರ...

First Night
Published on

ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಬಂಧಿಸಿದ ಸುದ್ದಿಗಳು ಒಂದಿಲ್ಲೊಂದು ಕಾರಣಕ್ಕೆ ಜನರ ಗಮನ ಸೆಳೆಯುತ್ತಿದ್ದು, ಕೆಲವು ಗಂಭೀರ ವಿಚಾರಗಳಿಗೂ ಆಗಿಂದಾಗೆ ಸದ್ದು ಮಾಡುತ್ತಿದ್ದು, ಇದೀಗ ಮೊದಲ ರಾತ್ರಿಯಲ್ಲಿ ಮಹಿಳೆಯೊಬ್ಬರು ತನ್ನ ಪತಿಗೆ ಮಟನ್​, ಗಾಂಜಾ, ಬಿಯರ್​ (Beer) ಕೇಳಿದ್ದು, ಈ ವಿಚಾರ ಹುಡುಗನ ಮನೆಯವರಿಗೆ ಆಘಾತವನ್ನುಂಟು ಮಾಡಿದೆ.

ಉತ್ತರಪ್ರದೇಶದ ಸಹರಾನ್​ಪುರದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ. ಇದಲ್ಲದೆ ವಧು ತೃತೀಯ ಲಿಂಗಿ ಎಂಬ ಆರೋಪ ಕೇಳಿ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮದುವೆಯಾದ ಬಳಿಕ ಮೊದಲ ರಾತ್ರಿಗೂ ಮುನ್ನ ನಡೆದ ಮುಹ್ ದಿಖೈ ಶಾಸ್ತ್ರದ ವೇಳೆ ವಧು ತನಗೆ ಬಿಯರ್​ (Beer) ಬೇಕು ಎಂದು ಹೇಳಿದ್ದು, ವರ ಆಕೆಗೆ ಒಂದು ಬಿಯರ್​ (Beer) ಬಾಟಲ್​ ತಂಡುಕೊಡಲು ಸಿದ್ದನಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ. ಬಳಿಕ ಆಕೆ ಬಿಯರ್​ ಜೊತೆಗೆ ಗಾಂಜಾ ಹಾಗೂ ಮಟನ್​ ತಂದುಕೊಡುವಂತೆ ಬೇಡಿಕೆಯನ್ನು ಇರಿಸಿದ್ದು, ಇದನ್ನು ಕೇಳಿದ ವರನ ಕುಟುಂಬಸ್ಥರು ಗಾಬರಿಗೊಂಡಿದ್ದು, ಕೂಡಲೇ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಇದಲ್ಲದೆ ಆಕೆ ಹೆಣ್ಣಲ್ಲ ತೃತೀಯಲಿಂಗಿ ಎಂದು ವರನ ಕುಟುಂಬಸ್ಥರು ದೂರು ದಾಖಲಿಸಿದ್ದು, ಈ ಸಂಬಂಧ ಅಧಿಕಾರಿಗಳು ಉಭಯ ಕುಟುಂಬಸ್ಥರನ್ನು ಕರೆಸಿ ರಾಜಿ ಸಂಧಾನ ಮಾಡಿದ್ದಾರೆ. ಆ ಬಳಿಕ ಉಭಯ ಕುಟುಂಬಸ್ಥರು ಈ ವಿಚಾರವನ್ನು ಮನೆಯಲ್ಲಿ ಇತ್ಯರ್ಥಪಡಿಸಿಕೊಳ್ಳುವುದಾಗಿ ಹೇಳಿ ದೂರನ್ನು ಹಿಂಪಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net