ಇಟ್ಟಿಗೆ ಭಟ್ಟಿ ಮಾಲೀಕನ ಪುತ್ರ ಐಎಎಸ್​ ಆಫೀಸರ್​

22-RNR-03
Published on

ರಾಣೆಬೆನ್ನೂರ: ಕಠಿಣ ಪರಿಶ್ರಮ ಹಾಗೂ ನಿರಂತರ ಓದಿನಿಂದ ಎಂಥಹ ಪರೀೆಯನ್ನೂ ಎದುರಿಸಬಹುದು. ಇದಕ್ಕೆ ನಾನು 41ನೇ ರ್ಯಾಂಕ್​ ಬಂದಿರುವುದೇ ಸಾ...!

ಇದು ದೇಶದ ಅತ್ಯುನ್ನತ ನಾಗರಿಕ ಆಡಳಿತ ಸೇವೆ (ಐಎಎಸ್​) ಪರೀಕ್ಷೆಯಲ್ಲಿ ದೇಶಕ್ಕೆ 41ನೇ ರ್ಯಾಂಕ್​ ಹಾಗೂ ರಾಜ್ಯಕ್ಕೆ 2ನೇ ರ್ಯಾಂಕ್​ ಬಂದಿರುವ ರಾಣೆಬೆನ್ನೂರ ತಾಲೂಕಿನ ಕೋಡಿಯಾಲ ಹೊಸಪೇಟೆ ನಿವಾಸಿ ಡಾ. ಸಚಿನ ಬಸವರಾಜ ಗುತ್ತೂರ ಅವರ ವಿಶ್ವಾಸದ ಮಾತು.

ಡಾ. ಸಚಿನ ಕಳೆದ ಮೂರು ವರ್ಷದಿಂದ ಐಎಎಸ್​ ಕೋಚಿಂಗ್​ಗಾಗಿ ದೆಹಲಿಯಲ್ಲಿ ಉಳಿದುಕೊಂಡು ಅಧ್ಯಯನ ಮಾಡುತ್ತಿದ್ದರು. ಮೂರು ಬಾರಿ ಪ್ರಯತ್ನ ಪಟ್ಟು ನಿರಾಸೆಗೊಂಡಿದ್ದರು. ಆದರೆ, ಛಲಬಿಡದೆ 4ನೇ ಬಾರಿಗೆ ಐಎಎಸ್​ ಪರೀೆ ಬರೆದಿದ್ದು ದೇಶಕ್ಕೆ 41ನೇ ರ್ಯಾಂಕ್​ನಲ್ಲಿ ಉತ್ತೀರ್ಣರಾಗಿದ್ದಾರೆ.

ಡಾ. ಸಚಿನ ಹರಿಹರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ ಮುಗಿಸಿ ದಾವಣಗೆರೆ ವೈಷ್ಣವಿ ಚೇತನ ಕಾಲೇಜ್​ನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಗಿಸಿದ್ದರು. ನಂತರ ಬೆಂಗಳೂರಿನ ಎಂಬಿಬಿಎಸ್​ ಅಧ್ಯಯನ ಮಾಡಿದ್ದರು. ಇದಾದ ಬಳಿಕ ವೈದ್ಯಕಿಯ ಸೇವೆ ಬದಲು ದೆಹಲಿಗೆ ತೆರಳಿ ಐಎಎಸ್​ ಪರೀೆ ಸಿದ್ಧತೆಯಲ್ಲಿ ತೊಡಗಿದ್ದರು. ಜೀವನದಲ್ಲಿ ಅಂದುಕೊಂಡಂತೆ ಐಎಎಸ್​ ಪರೀೆಯಲ್ಲಿ ತೇರ್ಗಡೆಯಾಗಿದ್ದಾರೆ.

ಇಟ್ಟಿಗೆಭಟ್ಟಿ ಮಾಲೀಕನ ಮಗ...

ಡಾ. ಸಚಿನ ಅವರ ತಂದೆ ಬಸವರಾಜ ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ ಇಟ್ಟಿಗೆಭಟ್ಟಿ ಉದ್ಯಮ ಮಾಡಿಕೊಂಡಿದ್ದಾರೆ. ಇವರ ಕುಟುಂಬದ ಬಹುತೇಕರು ಇಲ್ಲಿಯ ದುಡಿದು ಜೀವನ ನಡೆಸುತ್ತಿದ್ದಾರೆ. ಆದರೆ, ಮಕ್ಕಳನ್ನು ಚನ್ನಾಗಿ ಓದಿಸಬೇಕು ಎಂದು ಕನಸು ಕಂಡಿದ್ದ ಬಸವರಾಜ ಅವರು ಪುತ್ರನ ಓದಿಗೆ ಅನುಕೂಲ ಮಾಡಿಕೊಟ್ಟಿದ್ದರು.

ಕರ್ನಾಟಕದಲ್ಲಿಯೆ ಸೇವೆ ಮಾಡುವಾಸೆ...

ಐಎಎಸ್​ ಪರೀೆಯಲ್ಲಿ ತೇರ್ಗಡೆಯಾಗಿರುವ ಡಾ. ಸಚಿನ "ವಿಜಯವಾಣಿ'ಯೊಂದಿಗೆ ಮಾತನಾಡಿ, ದೆಹಲಿಯಲ್ಲಿದ್ದು ಅಧ್ಯಯನ ಮಾಡಿದ್ದೇನೆ. ಆದರೆ, ನನ್ನ ಕರ್ಮ ಭೂಮಿ ಕರ್ನಾಟಕವೇ ಆಗಿರಬೇಕು ಎಂಬ ಮಹತ್ವದ ಕನಸು ನನ್ನದ್ದು. ಆದ್ದರಿಂದ ಜಿಲ್ಲಾಧಿಕಾರಿಯಾಗಿ ಕರ್ನಾಟಕದಲ್ಲಿಯೆ ಸೇವೆ ಸಲ್ಲಿಸುವ ಆಸೆಯಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net