ಸ್ತನ್ಯಪಾನದಿಂದ ತಾಯಿ-ಮಗು ಸಂಬಂಧ ಗಟ್ಟಿ

Feeding
ಮಾಗುಂಡಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಡಾ. ಮಂಜೇಶ್, ಎ.ಆರ್.ಸುರೇಂದ್ರ, ಭಗವಾನ್, ಸತೀಶ್ ಅರಳೀಕೊಪ್ಪ, ಕೆ.ಜೆ.ಶ್ರೀನಿವಾಸ್ ಇತರರಿದ್ದರು.
Published on

ಬಾಳೆಹೊನ್ನೂರು: ತಾಯಂದಿರು ಮಕ್ಕಳಿಗೆ ಸ್ತನ್ಯಪಾನ ಮಾಡಿಸುವುದರಿಂದ ತಾಯಿ-ಮಗುವಿನ ಸಂಬಂಧ ಗಟ್ಟಿಯಾಗುತ್ತದೆ ಹಾಗೂ ಮಗುವಿಗೆ ರೋಗನಿರೋಧಕ ಶಕ್ತಿ ಲಭಿಸುತ್ತದೆ ಎಂದು ಮಾಗುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಂಜೇಶ್ ಹೇಳಿದರು.

ಮಾಗುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ, ರೋಟರಿ ಕ್ಲಬ್‌ನಿಂದ ಗುರುವಾರ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ಮಗುವಿಗೆ ಹಾಲುಣಿಸುವ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ತಾಯಿ ತನ್ನ ಆರೋಗ್ಯ ಕಾಪಾಡಿಕೊಂಡು ಮಕ್ಕಳ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಸ್ತನ್ಯಪಾನ ಸಪ್ತಾಹ ಆಚರಣೆ ಮೂಲಕ ಮಹಿಳೆಯರಲ್ಲಿ ಇರುವ ಕೀಳರಿಮೆ ದೂರವಾಗಬೇಕು. ಮಕ್ಕಳಿಗೆ ಹಾಲುಣಿಸುವುದರಿಂದ ಮಕ್ಕಳ ಅರೋಗ್ಯ ವೃದ್ಧಿಯಾಗುತ್ತದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಸ್ತನ್ಯಪಾನ ಜಾಗೃತಿ ಮೂಡಿಸುವುದು ಹಾಗೂ ಇಂತಹ ಅಭಿಯಾನಗಳಿಗೆ ಹೆಚ್ಚು ಒತ್ತು ನೀಡಿವುದು ರೋಟರಿ ಸಂಸ್ಥೆ ಆದ್ಯತೆ. ಸ್ತನ್ಯಪಾನ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರವಾಗಿಸುವುದು ಸಂಸ್ಥೆಯ ಉದ್ದೇಶ ಎಂದು ಹೇಳಿದರು.
ಹಿರಿಯ ಆರೋಗ್ಯ ನಿರೀಕ್ಷಕ ಭಗವಾನ್, ರೋಟರಿ ಖಜಾಂಚಿ ಸತೀಶ್ ಅರಳೀಕೊಪ್ಪ, ಸದಸ್ಯ ಕೆ.ಜೆ.ಶ್ರೀನಿವಾಸ್, ಎಂ.ಎಲ್.ಮಂಜೇಶ್, ಮಾಗುಂಡಿ ಸರ್ಕಾರಿ ಪ್ರೌಢಶಾಲೆ ಉಸ್ತುವಾರಿ ಸಮಿತಿ ಅಧ್ಯಕ್ಷ ಕೆ.ಟಿ.ಸುದೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net