ಚೀನಾದ ಕಮಾಂಡಿಂಗ್​ ಅಧಿಕಾರಿಯನ್ನೂ ಹತ್ಯೆ ಮಾಡಿದೆ ಭಾರತ ಸೇನೆ

China 17 June 20
Published on

ನವದೆಹಲಿ: ಭಾರತ-ಚೀನಾ ಗಡಿ ಪ್ರದೇಶ  ಗಲ್ವನ್​ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಹಾಗೇ ಚೀನಾದ 43 ಸೈನಿಕರನ್ನು ಭಾರತೀಯ ಯೋಧರು ಹತ್ಯೆ ಮಾಡಿದ್ದಾರೆ ಎಂದೂ ಮಾಹಿತಿ ನೀಡಿದ್ದವು.

ಇದೀಗ ಇನ್ನೊಂದು ಮಾಹಿತಿ ಸೇನಾ ಮೂಲದಿಂದ ಹೊರಬಿದ್ದಿದೆ. ಚೀನಾ ಸೇನೆಯ ಕಮಾಂಡಿಂಗ್​ ಅಧಿಕಾರಿಯೋರ್ವ ಹತನಾಗಿದ್ದಾನೆ ಎಂದು ಹೇಳಿವೆ. ಇದನ್ನೂ ಓದಿ: VIDEO: ಗೋವಾದಲ್ಲಿ ಭರ್ಜರಿ ಮಳೆ; ಸಮುದ್ರದಲ್ಲಿ ಹೆಚ್ಚುತ್ತಿದೆ ಅಲೆಗಳ ಅಬ್ಬರ

ಈ ಕಮಾಂಡಿಂಗ್ ಅಧಿಕಾರಿಯ ಬಗ್ಗೆ ಹೆಚ್ಚೇನೂ ಮಾಹಿತಿ ನೀಡಲಿಲ್ಲ. ಆದರೆ ಮೃತರಾದ 43 ಚೀನೀ ಸೈನಿಕರಲ್ಲಿ ಓರ್ವ ಕಮಾಂಡಿಂಗ್​ ಅಧಿಕಾರಿಯೂ ಸೇರಿದ್ದಾನೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net