ಮಿದುಳಿಗೆ ಕೈಹಾಕಿದ ಪ್ರಶ್ನೆಯಿದು! ನಿಮ್ಮಿಂದ ಉತ್ತರಿಸಲು ಸಾಧ್ಯವೇ? ಒಮ್ಮೆ ಪ್ರಯತ್ನಿಸಿ | Brain Teaser

ಬ್ರೇನ್​ ಟೀಸರ್​ ಪ್ರಶ್ನೆ
ಬ್ರೇನ್​ ಟೀಸರ್​ ಪ್ರಶ್ನೆ
Published on
Brain Teaser: ಬುದ್ಧಿವಂತಿಕೆಯ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದು ತೀರ ಸಾಮಾನ್ಯ. ಆದರೆ, ಅಲ್ಲಿ ಕೇಳಲಾದ ಪ್ರಶ್ನೆಗಳು ನೋಡುವುದಕ್ಕೆ ಎಷ್ಟು ವಿಚಿತ್ರ ಹಾಗೂ ಗೊಂದಲ ಅನಿಸುತ್ತದೆಯೋ ಅದಕ್ಕೆ ಸಿಗುವ ಉತ್ತರ ನೋಡಿ ಅಯ್ಯೋ ಇಷ್ಟೇನಾ ಎಂದು ಅನಿಸುವುದರಲ್ಲಿ ಅನುಮಾನವೇ ಬೇಡ. ಇದು ಬಹುತೇಕರ ಅನಿಸಿಕೆ. ಅದರಲ್ಲೂ ಗಣಿತಕ್ಕೆ ಸಂಬಂಧಿಸಿದಂತ ಪ್ರಶ್ನೆಗಳು ನೆಟ್ಟಿಗರ ತಲೆಗೆ ಹೊಕ್ಕಿ, ಉತ್ತರಿಸಲು ಆಗದೆ, ಬಿಟ್ಟು ಸುಮ್ಮನೆ ಕೂರಲು ಆಗದಂತ ಪರಿಸ್ಥಿತಿಗೆ ದೂಡುವುದು ನಿಜ. ಕೊನೆಯವರೆಗೂ ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಇಂತಹ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ಲಭಿಸಲ್ಲ.

ಕೊಡಿ ನಿಮ್ಮ ಮಿದುಳಿಗೆ ಕೆಲಸ

ಬ್ರೇನ್​ ಟೀಸರ್ ಹೆಸರಿನಡಿಯಲ್ಲಿ ಇಂತಹ ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಜಾಲತಾಣಗಳಲ್ಲಿ ಆಗಾಗ್ಗೆ ಕೇಳಲಾಗುತ್ತದೆ. ಕೆಲವರು ಇದು ಬಹಳ ಸಿಂಪಲ್ ಪ್ರಶ್ನೆ ಎಂದು ಉತ್ತರಿಸಲು ಹೋಗಿ ಕಡೆಗೆ ಉತ್ತರ ತಿಳಿಯದೆ, ಕಂಗಲಾಗುತ್ತಾರೆ. ಒಗಟಿನಂತೆ ಕಾಣುವ ಗಣಿತದ ಲೆಕ್ಕಾಚಾರಕ್ಕೆ ಉತ್ತರ ಗೊತ್ತಿರದಿದ್ದರೂ ಇದನ್ನು ಹೇಗಾದರೂ ಮಾಡಿ ಬಿಡಿಸಬೇಕು, ಇದಕ್ಕೆ ಉತ್ತರ ಕಂಡುಕೊಳ್ಳಬೇಕು ಎಂದು ಹಲವರು ನಾನಾ ಕಸರತ್ತು ನಡೆಸುತ್ತಾರೆ. ಸದ್ಯ ಈ ಮೇಲ್ಕಂಡ ಬ್ರೇನ್​ ಟೀಸರ್​ ಕೂಡ ಜಾಲತಾಣದಲ್ಲಿ ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆಯನ್ನು ಗಳಿಸಿದ್ದು, ಉತ್ತರಿಸಲು ವಿಫಲರಾಗುವಂತೆ ಮಾಡಿದೆ.

ಪ್ರಶ್ನೆ ಹೀಗಿದೆ:

5+5÷5=? ಕೊಡಿ ನಿಮ್ಮ ಮಿದುಳಿಗೆ ಕೆಲಸ

ನಿಮಗೂ ಇದೇ ಉತ್ತರ ಸಿಕ್ಕಿತೇ?

ಉತ್ತರ 6. ಹೇಗೆ ಅಂತೀರಾ? ಹೀಗಿದೆ ನೋಡಿ ಲೆಕ್ಕಾಚಾರ 5 ಅನ್ನು 5ರಿಂದ ಭಾಗಕಾರ ಮಾಡಿ. ಆಗ ನಿಮಗೆ 1 ಸಿಗುತ್ತದೆ. ನಂತರ ಅದೇ 1 ಸಂಖ್ಯೆಯನ್ನು 5ರೊಂದಿಗೆ ಕೂಡಿಸಿದರೆ ಲಭಿಸುವ ಉತ್ತರವೇ 6. ಇದೇ ಉತ್ತರ ನಿಮಗೂ ದೊರೆಯಿತೇ?
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net