ಅಂಗಾಂಗ ದಾನ ಮಾಡಿ.. ಐವರಿಗೆ ಜೀವ ನೀಡಿ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ Organ Donate

Organ Donate
Published on

ತೆಲಂಗಾಣ: ( Organ Donate ) ಭೀಕರ ರಸ್ತೆ ಅಪಘಾತದಲ್ಲಿ ಯುವಕ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದನು. ಆದರೆ ಪೋಷಕರು ತಮ್ಮ ಮಗನ ಅಂಗಾಂಗ ದಾನ ಮಾಡುವ ಮೂಲಕ ಐವರಿಗೆ ಜೀವ ಉಳಿಸಿ ಸಾರ್ಥಕತೆ ಮೆರೆದಿದ್ದಾರೆ.

ಯುವಕನೊಬ್ಬ ಸತ್ತು ನಾಲ್ವರಿಗೆ ಜನ್ಮ ನೀಡಿದ್ದಾನೆ.. ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಆತನ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ.
ಖಮ್ಮಂ ಜಿಲ್ಲೆ ಕುಸುಮಂಚಿ ಮಂಡಲದ ಚೇಗೊಮ್ಮ ಗ್ರಾಮದ ಮಹೇಶ್ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಕುಟುಂಬಸ್ಥರು ಮಹೇಶ್ ಅವರನ್ನು ಚಿಕಿತ್ಸೆಗಾಗಿ ಖಮ್ಮಂನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಕಿತ್ಸೆ ನಂತರವೂ ಚೇತರಿಸಿಕೊಳ್ಳಲಿಲ್ಲ, ಮೆದುಳು ನಿಷ್ಕ್ರಿಯಗೊಂಡಿರುವುದನ್ನು ವೈದ್ಯರು ದೃಢಪಡಿಸಿದರು.
ಅಂಗಾಂಗ ದಾನದ ಬಗ್ಗೆ ವೈದ್ಯರು ಮಹೇಶ್ ಕುಟುಂಬಸ್ಥರಿಗೆ ಅರಿವು ಮೂಡಿಸಿದರು. ವೈದ್ಯರ ಸಲಹೆಯಂತೆ ಅಂಗಾಂಗ ದಾನಕ್ಕೆ ಒಪ್ಪಿದ ಮಹೇಶ್ ಕುಟುಂಬಸ್ಥರು.. ಹೀಗಾಗಿ ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಗೆ ಕರೆದೊಯ್ದು ಇಬ್ಬರಿಗೆ ಕಣ್ಣು, ಒಬ್ಬರಿಗೆ ಲಿವರ್ ದಾನ ಮಾಡಿ  ಒಟ್ಟು ಐದು ಜನರಿಗೆ ಮರುಜನ್ಮ  ನೀಡಿದ್ದಾರೆ.
ಬಳಿಕ ಮಹೇಶ ಅವರ ಮೃತದೇಹವನ್ನು ಅವರ ಹುಟ್ಟೂರು ಕೂಸುಮಂಚಿಯಿಂದ ಚೇಗೊಮ್ಮನ ಮಂಡಲಕ್ಕೆ ತಂದು ಅಂತ್ಯಕ್ರಿಯೆ ಮಾಡಲಾಯ್ತು. ದುಃಖದಲ್ಲೂ ಆದರ್ಶ ನಿರ್ಧಾರ ಕೈಗೊಂಡಿರುವ ಮಹೇಶ್ ಪೋಷಕರಾದ ಜಾನಕಮ್ಮ ಹಾಗೂ ವೀರಬಾಬು ಅವರನ್ನು ಹಲವರು ಅಭಿನಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net