ತಾನೂ ಸಾಯುವಾಗ 6 ಮಂದಿಗೆ ಜೀವ ನೀಡಿದ ಆಟೋ ಡ್ರೈವರ್; ಖುಷಿ ಒಂದೆಡೆಯಾದ್ರೆ..ಕಣ್ಣೀರು ಮತ್ತೊಂದು ಕಡೆ

brain dead auto driver saves six patients
Published on

ಹೈದ್ರಾಬಾದ್​: ನಿಮಗೆ ಸಹಾಯ ಮಾಡುವ ಗುಣ ಇದ್ದರೆ ಸಾಕು, ನಿಮ್ಮ ಮರಣದ ನಂತರ ಕೂಡಾ ಸಹಾಯ ಮಾಡಬಹುದು. ರಸ್ತೆ ಅಪಘಾತದಿಂದ ಬ್ರೈನ್​ ಡೆಡ್​​ ಆಗಿರುವ ಆಟೋಚಾಲನ ಅಂಗಾಂಗವನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಇದರಿಂದ ಆರು ಮಂದಿ ಮರುಜನ್ಮ ಪಡೆದಿದ್ದಾರೆ.

ಯಾದಾದ್ರಿ ಜಿಲ್ಲೆಯ ರಾಮಣ್ಣಪೇಟೆ ಮಂಡಲದ ಇಂದ್ರಪಾಲನಗರಂ ಗ್ರಾಮದ ಅಶೋಕ್ ಆಟೋ ಚಾಲಕನಾಗಿ ಜೀವನ ಸಾಗಿಸುತ್ತಿದ್ದರು. ಆಗಸ್ಟ್ 10ರಂದು ಡಿಜೆ ಬಾಕ್ಸ್ ಖರೀದಿಸಲು ಸಂಬಂಧಿಕರೊಂದಿಗೆ ವಾಹನದಲ್ಲಿ ನಿಜಾಮಾಬಾದ್ ಗೆ ತೆರಳಿದ್ದರು. ಗಜ್ವೇಲ್ ಸಮೀಪ ಬರುವಾಗ ವಾಹನ ಅಪಘಾತಕ್ಕೀಡಾಗಿದ್ದು, ಈ ಅವಘಡದಲ್ಲಿ ವಾಹನದ ಹಿಂಬದಿ ಕುಳಿತಿದ್ದ ಅಶೋಕ್ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಶೋಕ್ ಅವರನ್ನು ಸಿಕಂದರಾಬಾದ್‌ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಶೋಕ್ ಬ್ರೈನ್ ಡೆಡ್ ಆಗಿರುವುದಾಗಿ ವೈದ್ಯರು ತಿಳಿಸಿದರು.

ಜೀವದಾನ ಟ್ರಸ್ಟ್.. ಅವರ ಕುಟುಂಬ ಸದಸ್ಯರಿಗೆ ಅಂಗಾಂಗ ದಾನದ ಅಗತ್ಯದ ಬಗ್ಗೆ ಅರಿವು ಮೂಡಿಸಿದ್ದಾರೆ. ಇತರರಿಗೆ ಜೀವದಾನ ಮಾಡುವ ಉದ್ದೇಶದಿಂದ ಅಶೋಕ್ ಅವರ ಕುಟುಂಬ ಸದಸ್ಯರು ದೊಡ್ಡ ಹೃದಯದಿಂದ ಅಂಗಾಂಗ ದಾನವನ್ನು ಸ್ವೀಕರಿಸಿದರು. ಎರಡು ಕಿಡ್ನಿ, ಹೃದಯ, ಯಕೃತ್ ಮತ್ತು ಶ್ವಾಸಕೋಶಗಳನ್ನು ತೆಗೆದು ನಾಲ್ಕು ಜನರಿಗೆ ಜೀವಂದನ ಕಸಿ ಮಾಡಲಾಗಿದೆ.

ಚಾಲಕ ಅಶೋಕ್ ಸಾವನ್ನಪ್ಪಿದ್ದು, ಆರು ಜೀವಗಳನ್ನು ಉಳಿಸಿದ್ದಾರೆ. ಅಂಗಾಂಗ ದಾನದ ಬಳಿಕ ಆಸ್ಪತ್ರೆಯ ವೈದ್ಯರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net