

ಶಿವಮೊಗ್ಗ: ಬ್ರಾಹ್ಮಿನ್ ಆರ್ಗನೈಸೇಷನ್ ಆ್ ಇಂಡಿಯಾದ ಶಿವಮೊಗ್ಗ ಜಿಲ್ಲಾ ಸಮಿತಿ ಉದ್ಘಾಟನಾ ಸಮಾರಂಭ ಮಾ.7ರಂದು ಬೆಳಗ್ಗೆ 11ಕ್ಕೆ ಕೋಟೆ ರಸ್ತೆ ಶ್ರೀ ಗಾಯತ್ರಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ವೆಂಕಟೇಶ್ ರಾವ್ ಹೇಳಿದರು.
ಶಿವಮೊಗ್ಗದ ಭೀಮನಕಟ್ಟೆ ಅಚ್ಚುತ ಪ್ರೇಕ್ಷಾಚಾರ್ಯರ ಸಂಸ್ಥಾನದ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವರು. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸಮಾರಂಭ ಉದ್ಘಾಟಿಸುವರು. ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಸುಖಬೀರ್ ಶರ್ಮ, ರಾಷ್ಟ್ರೀಯ ಅಧ್ಯಕ್ಷ ರಮೇಶ ಕೀಚಲು, ರಾಜ್ಯಾಧ್ಯಕ್ಷ ರವೀಂದ್ರ ಕುಲಕರ್ಣಿ ಉಪಸ್ಥಿತರಿರುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್, ಹೊಯ್ಸಳ ಸೌಹಾರ್ದ ಸಹಕಾರ ಅಧ್ಯಕ್ಷ ಎಂ.ಶಂಕರ್, ಸರ್ ಎಂ.ವಿ.ಸೊಸೈಟಿ ಅಧ್ಯಕ್ಷ ಡಾ. ಶ್ರೀಧರ್, ವಿಪ್ರ ಟ್ರಸ್ಟ್‌ನ ಟ್ರಸ್ಟಿ ಎಸ್.ಜಿ.ಗೋಪಾಲ್ ಪಾಲ್ಗೊಳ್ಳುವರು. 30 ಜನರ ತಂಡ ನಿರ್ಮಾಣ ಮಾಡಿದ್ದೇವೆ. 7 ಪ್ರತಿನಿಧಿಗಳನ್ನು ಮಾಡಿ ತಾಲೂಕು ಘಟಕ ನಿರ್ಮಾಣ ಮಾಡಲಿದ್ದೇವೆ. ಶಿವಮೊಗ್ಗದಲ್ಲಿ ಮಹಿಳಾ ಘಟಕ ಮಾಡಲಿದ್ದೇವೆ. ಹಿಂದು ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ಸಂಸ್ಥೆ ಪ್ರಾರಂಭಿಸಲಾಗಿದೆ ಎಂದರು.
ಭಗವಾನ್ ಪರಶುರಾಮ ಬ್ರಾಹ್ಮಿನ್ ಆರ್ಗನೈಸೇಷನ್ ಚಾರಿಟಬಲ್ ಟ್ರಸ್ಟ್‌ನಡಿ ಬ್ರಾಹ್ಮಿನ್ ಆರ್ಗನೈಸೇಶನ್ ಆ್ ಇಂಡಿಯಾ ಸಂಸ್ಥೆಯು ದೆಹಲಿಯಲ್ಲಿ ನೋಂದಣಿಯಾಗಿದೆ. ದೇಶದಲ್ಲಿ 15ಕ್ಕೂ ಹೆಚ್ಚು ರಾಜ್ಯ ಹಾಗೂ ಕರ್ನಾಟಕದ 18 ಜಿಲ್ಲೆಗಳಲ್ಲಿ ಕಾರ್ಯನಿರತವಾಗಿದೆ ಎಂದು ತಿಳಿಸಿದರು.
ನಿರ್ದೇಶಕರಾದ ಎಚ್.ಎನ್.ಛಾಯಾಪತಿ, ಎಚ್.ಆರ್.ಸಂತೋಷ್‌ಕುಮಾರ್, ಕೆ.ಕೆ.ಯಜ್ಞನಾರಾಯಣ, ಕೆ.ಗುರುರಾಜ್ ಅಡಿಗ, ಸವಿತಾ ರಮೇಶ್, ಎಂ.ಎಸ್.ರವಿಪ್ರಕಾಶ್, ಎಸ್.ಎನ್.ಮಂಜುನಾಥ್, ಎ.ಜಿ.ರಾಘವೇಂದ್ರಾಚಾರ್, ಕೆ.ಎಲ್.ಪ್ರಹ್ಲಾದ್, ಎಸ್.ಬಾಲಕೃಷ್ಣ ಭಟ್, ಕೆ.ವಿ.ಗಣಪತಿ ಸುದ್ದಿಗೋಷ್ಠಿಯಲ್ಲಿದ್ದರು.