ಈ ಗುಣಗಳಿರುವ ಹುಡುಗರು ತಮ್ಮ ಜೀವನದಲ್ಲಿ ಸಾಕಷ್ಟು ಹಣ ಗಳಿಸಿ ಬೇಗ ಶ್ರೀಮಂತರಾಗುತ್ತಾರೆ! Money Earning

Money Earning
Published on

Money Earning : ಹಣ ಸಂಪಾದಿಸಲು ಅನೇಕ ಜನರು ತುಂಬಾ ಕಷ್ಟಪಡುತ್ತಾರೆ. ವಾಸ್ತವವಾಗಿ ಶ್ರಮವಿಲ್ಲದೆ ಹಣ ಬರುವುದಿಲ್ಲ. ಅಲ್ಲದೆ, ಹಣ ಸಂಪಾದಿಸುವುದು ಕೂಡ ಒಂದು ಕಲೆ ಎಂದು ಹೇಳಬಹುದು. ಸರಿಯಾದ ರೀತಿಯಲ್ಲಿ ಸಂಪಾದನೆ ಮಾಡುವ ಆಸಕ್ತಿ ಇರುವವರು ತಮ್ಮ ಬುದ್ಧಿವಂತಿಕೆಯನ್ನು ಹೆಚ್ಚಾಗಿ ಹಣ ಗಳಿಸಲು ಬಳಸುತ್ತಾರೆ.

ಮನೋವಿಜ್ಞಾನದ ಪ್ರಕಾರ ಕೆಲವು ಗುಣಲಕ್ಷಣಗಳನ್ನು ಹೊಂದಿರುವ ಹುಡುಗರು ತಮ್ಮ ಜೀವನದಲ್ಲಿ ಚೆನ್ನಾಗಿ ಹಣ ಗಳಿಸುತ್ತಾರೆ. ಹಣ ಸಂಪಾದಿಸುವ ಹುಡುಗರು ಯಾವುದೇ ಕಾರಣಕ್ಕೂ ಹೆಚ್ಚು ಸಮಯವನ್ನು ವ್ಯರ್ಥ ಮಾಡುವುದೇ ಇಲ್ಲ. ಅವರು ತಮ್ಮ ಸಮಯವನ್ನು ಯಾವಾಗಲೂ ಹಣ ಗಳಿಸಲು ಬಳಸುತ್ತಾರೆ.

ಗುರಿಯತ್ತ ಸಾಗುವುದು

ಹಣ ಮಾಡುವ ವ್ಯಕ್ತಿಗೆ ಬೇಕಾದ ಮುಖ್ಯವಾದ ಲಕ್ಷಣವೆಂದರೆ ಗುರಿಯತ್ತ ಸಾಗುವುದು. ಏನೇ ಅಡತಡೆ ಬಂದರೂ ಅದನ್ನು ದಾಟಿ ಗುರಿಯತ್ತ ಸಾಗಿದರೆ ಮಾತ್ರ ಹಣ ಗಳಿಸಬಹುದು. ಅದೇ ರೀತಿ ಹಣ ಮಾಡುವ ಗುಣ ಹೊಂದಿರುವ ಹುಡುಗರು ತಮ್ಮ ಜೀವನದಲ್ಲಿ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಗುರಿಯತ್ತ ಸಾಗುತ್ತಾರೆ. ಹಣ ಗಳಿಸುವ ಹುಡುಗರು ವೃತ್ತಿಪರ ಸಂಬಂಧಗಳನ್ನು ನಿರ್ಮಿಸಲು ನೋಡುತ್ತಾರೆ ಮತ್ತು ಸದಾ ಅವಕಾಶಗಳಿಗಾಗಿ ಹಾತೊರೆಯುತ್ತಾರೆ.

ಹಣದ ನಿರ್ವಹಣೆ

ಹಣದ ನಿರ್ವಹಣೆಯು ವಿಶ್ವದ ಅತ್ಯಂತ ಹಳೆಯ ಕೌಶಲ್ಯಗಳಲ್ಲಿ ಒಂದಾಗಿದೆ. ಬಹುತೇಕ ಶ್ರೀಮಂತರು ಹಣವನ್ನು ಹೇಗೆ ನಿರ್ವಹಿಸಬೇಕೆಂದು ಚೆನ್ನಾಗಿ ತಿಳಿದಿರುತ್ತಾರೆ. ಹೀಗಾಗಿಯೇ ಅವರು ಹಣ ಗಳಿಕೆಯಲ್ಲಿ ಸದಾ ಮುಂದೆ ಸಾಗುತ್ತಾರೆ. ಹಣ ಗಳಿಕೆ ಮಾಡಿದರೆ ಸಾಲದು ಅದನ್ನು ನಿರ್ವಹಿಸುವುದು ಕೂಡ ಒಂದು ಕಲೆಯಾಗಿದೆ. ಗಳಿಕೆಗಿಂತ ಖರ್ಚು ಜಾಸ್ತಿ ಇದ್ದರೆ ಅವರೆಂದಿಗೂ ಶ್ರೀಮಂತರಾಗಲು ಸಾಧ್ಯವೇ ಇಲ್ಲ. ಯಾರೂ ಹಣವನ್ನು ಚೆನ್ನಾಗಿ ನಿಭಾಯಿಸುವ ಗುಣ ಹೊಂದಿರುತ್ತಾರೋ ಅವರು ಆರ್ಥಿಕವಾಗಿ ಸದಾ ಮುಂದಿರುತ್ತಾರೆ.

ಸಾಲ ಮಾಡದೇ ಇರುವುದು

ಜೀವನದಲ್ಲಿ ಶ್ರೀಮಂತರಾಗಲು ಬಯಸಿದರೆ ಮೊದಲು ಸಾಲವನ್ನು ತಪ್ಪಿಸಬೇಕು. ಸಾಲವನ್ನು ತೆಗೆದುಕೊಂಡರೂ ಅದನ್ನು ನಿರ್ವಹಿಸುವ ಕಲೆ ಗೊತ್ತಿರಬೇಕು. ನೀವು ಸಂಪತ್ತನ್ನು ನಿರ್ಮಿಸಲು ಬಯಸಿದರೆ, ಮೊದಲು ಕ್ರೆಡಿಟ್ ಕಾರ್ಡ್‌ಗಳನ್ನು ಅತಿಯಾಗಿ ಬಳಸಬಾರದು. ಸಾಲ ಬೆಳೆದಂತೆ ನಿಮ್ಮ ಸಂಪತ್ತು ಕುಸಿಯುತ್ತದೆ. ಇದರಿಂದ ಕೊನೆಗೊಂದು ದಿನ ದಿವಾಳಿಯಾಗಬೇಕುತ್ತದೆ. ಹಣ ಮಾಡಲು ಬಯಸುವ ಹುಡುಗರು ಎಂದಿಗೂ ಸಾಲಕ್ಕೆ ಕೈಹಾಕುವುದಿಲ್ಲ.

ಅಂದಹಾಗೆ ಹಣ ಸಂಪಾದಿಸಲು ಒಂದು ಸರಿಯಾದ ಯೋಜನೆ ಬೇಕು. ಅಲ್ಲದೆ, ಮುಖ್ಯವಾಗಿ ತಾಳ್ಮೆಯು ಇರಬೇಕು. ಆಗ ಮಾತ್ರ ಹಣ ಬರುತ್ತದೆ. ಹಣ ಸಂಪಾದಿಸಲು ನೀವು ಮಾಡುವ ಕೆಲಸಕ್ಕೆ ಸಮರ್ಪಿತವಾಗಿರಬೇಕು. ಹಣ ಗಳಿಕೆಗೆ ಇರುವ ಅವಕಾಶಗಳನ್ನು ಬೆನ್ನತ್ತಬೇಕು. ಹಾಗಂತೆ ತಪ್ಪು ದಾರಿಗಳನ್ನು ಹಿಡಿಯಬಾರದು. ಮನೋವಿಜ್ಞಾನದ ಪ್ರಕಾರ ಈ ಎಲ್ಲ ಗುಣಲಕ್ಷಣಗಳನ್ನು ಹೊಂದಿರುವ ಹುಡುಗರು ಬಹಳಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಬೇಗನೆ ಶ್ರೀಮಂತರಾಗುತ್ತಾರೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net