

ಕೋಲಾರ: ಕಾರ್ತಿಕ್ ಸಿಂಗ್ ಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಪೇಟೆಚಾಮನಹಳ್ಳಿ ಬಡಾವಣೆಯ ಬಾಪೂಜಿ ಶಾಲಾ ಆವರಣದಲ್ಲಿ ಅಲಿಯಾಸ್ ಶೈನ್ ಹಾಗೂ ಸ್ನೇಹತರು ಕಾರ್ತಿಕ್ ಸಿಂಗ್ ನನ್ನು ನ.3ರಂದು ಹತ್ಯೆ ಮಾಡಿ ಪರಾರಿಯಾಗಿದ್ದರು.
ಆರೋಗ್ಯ ಸಮಸ್ಯೆಯಿಂದ ಕಾಲೇಜಿಗೆ ಹೋಗದೆ ಕಾರ್ತಿಕ್ ಸಿಂಗ್ ಮನೆಯಲ್ಲೆ ಇದ್ದ. ಇದನ್ನು ಅರಿತ ಶೈನ್ ಬಾಪೂಜಿ ಶಾಲಾ ಆವರಣಕ್ಕೆ ಕರೆಸಿಕೊಂಡಿದ್ದ. ಬಟ್ಟೆಗಳನ್ನು ಬಿಚ್ಚಿಸಿ ದೈಹಿಕವಾಗಿ ಹಿಂಸೆ ನೀಡಿ, ಮೈ ಮೇಲೆ ಆಯುದಗಳಿಂದ ತಿವಿದು ಗಾಯಗೊಳಿಸಿದ್ದಾರೆ. ತೀವ್ರ ರಕ್ತ ಸ್ರಾವವಾಗಿ ಕಾರ್ತಿಕ್ ಸಿಂಗ್ ಮೃತಪಟ್ಟಿದ್ದಾರೆ.
ಕಾರ್ತಿಕ್ ಸಿಂಗ್ ತಂದೆ ಅರುಣ್ ಸಿಂಗ್ ಆರೋಪಿಗಳ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಆರೋಪಿಗಳ ಪತ್ತೆಗಾಗಿ ಮೂರು ತನಿಖಾ ತಂಡಗಳನ್ನು ರಚನೆ ಮಾಡಲಾಗಿತ್ತು.
ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳು ತಮಿಳುನಾಡಿನಲ್ಲಿ ತಂಗಿದ್ದ ಮಾಹಿತಿಯ ಮೇರೆಗೆ ಭಾನುವಾರ ಪ್ರಮುಖ ಆರೋಪಿ ಶೈನ್ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಪ್ರಕರಣ ಸಂಭವಿಸಿದ್ದ ದಿನವೇ ಐಜಿಪಿ ರವಿಕಾಂತೇಗೌಡರ ನಗರ ಠಾಣೆಗೆ ಭೇಟಿ ನೀಡಿ ಆರೋಪಿಗಳನ್ನು ತ್ವತರಿತವಾಗಿ ಪತ್ತೆ ಹಚ್ಚಿ ಆತಂಕದ ವಾತಾವರಣ ನಿವಾರಣೆಗೆ ಪೊಲೂಸ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.