ಲವ್ ಬ್ರೇಕಪ್ ಮಾಡಿಕೊಂಡಿದ್ದಕ್ಕೆ, ಸಿಟ್ಟಿನಲ್ಲಿ ಗೆಳತಿಗೆ ಸ್ಕೂಟರ್​ನಲ್ಲಿ ಬಂದು ಡಿಕ್ಕಿ ಹೊಡೆದ ಗೆಳೆಯ| Boyfriend

Untitled design - 2025-09-26T134708.446
Published on

Boyfriend: ಮಧ್ಯಪ್ರದೇಶದ ಇಂದೋರ್​ನಲ್ಲಿ ಲವ್ ಬ್ರೇಕಪ್ ಮಾಡಿಕೊಂಡಿದ್ದ ಯುವತಿ, ರಾಜಿಯಾಗಿ ತಮ್ಮ ಸಂಬಂಧವನ್ನು ಮುಂದುವರೆಸಲು ನಿರಾಕರಿಸಿದ್ದಕ್ಕೆ ಸಿಟ್ಟಿನಲ್ಲಿ ಗೆಳತಿಗೆ ಯುವಕನೊಬ್ಬ ಆ್ಯಕ್ಟಿವ್ ಸ್ಕೂಟರ್​ನಲ್ಲಿ ಬಂದು ಡಿಕ್ಕಿ ಹೊಡೆದಿರುವ ಘಟನೆ ಗುರುವಾರ(ಸೆ. 25) ನಡೆದಿದೆ.

ಇಂದೋರ್​ನಲ್ಲಿ ಕಲ್ಪನಾ ನಗರದಲ್ಲಿ ಘಟನೆ ನಡೆದಿದೆ. ಯುವತಿ ಕೆಲವು ಸಮಯದ ಹಿಂದೆ ಆರೋಪಿಯೊಂದಿಗಿನ ತನ್ನ ಸಂಬಂಧವನ್ನು ಕೊನೆಗೊಳಿಸಿದ್ದಳು. ಆದರೆ, ಯುವಕ ಆಕೆಯನ್ನು ಬೆದರಿಸುತ್ತಿದ್ದ, ರಾಜಿಯಾಗುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಯುವತಿ ನಿರಾಕರಿಸಿದಾಗ ಆಕ್ರಮಣಕಾರಿಯಾಗಿ, ಹಿಂಸಾತ್ಮಕವಾಗಿ ವರ್ತಿಸಿದ್ದಾನೆ.

ಅತಿ ವೇಗದ ಆಕ್ಟಿವಾ ಸ್ಕೂಟರ್‌ನಲ್ಲಿ ಬಂದು ರಸ್ತೆಯಲ್ಲಿ ನಿಂತಿದ್ದ ತನ್ನ ಮಾಜಿ ಗೆಳತಿಗೆ ಉದ್ದೇಶಪೂರ್ವಕವಾಗಿ ರಭಸದಿಂದ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಯುವತಿಗೆ ಗಂಭೀರವಾಗಿದ್ದು, ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವತಿಯ ದೂರಿನನ್ವಯ ಹಿರಾರನಗರ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಹಲ್ಲೆ, ಬೆದರಿಕೆ ಮತ್ತು ಉದ್ದೇಶಪೂರ್ವಕ ಹಾನಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯಿಂದ ಆ ವ್ಯಕ್ತಿ ಪದೇ ಪದೇ ಅಪರಾಧ ಮಾಡಿ ಹಿನ್ನೆಲೆ ಇದ್ದು, ವಿವಿಧ ಠಾಣೆಗಳಲ್ಲಿ ಏಳು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

ಹಿರಾನಗರ ಠಾಣೆಯ ಪೊಲೀಸ್ ಅಧಿಕಾರಿ ಮಾತನಾಡಿ, ನಾವು ಆರೋಪಿಯನ್ನು ಗುರುತಿಸಿದ್ದೇವೆ. ಅವನ ಅಪರಾಧ ಹಿನ್ನೆಲೆಯನ್ನು ದೃಢಪಡಿಸಿದ್ದೇವೆ. ಹುಡುಕಾಟ ಆರಂಭಿಸಲಾಗಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net