ಮಹಿಳೆ ಹತ್ಯೆಗೈದಿದ್ದ ಪ್ರಿಯತಮನ ಬಂಧನ

ಸಿದ್ದರಾಜು.
ಸಿದ್ದರಾಜು
Published on

ಸಾಲಿಗ್ರಾಮ: ಭೇರ್ಯ ಗ್ರಾಮದ ಎಸ್‌ಜಿಆರ್ ಲಾಡ್ಜ್‌ನಲ್ಲಿ ಇತ್ತೀಚೆಗೆ ನಡೆದ ಮಹಿಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಿಯತಮ ಸಿದ್ದರಾಜುನನ್ನು ಕಳೆದ 23ರಂದು ಬಂಧಿಸಿದ್ದಾರೆ.

ದರ್ಶಿತಾ ನನ್ನ ಮಾವನ ಮಗಳು. ಮದುವೆಗೆ ಮುಂಚೆ ನಾನು ಆಕೆಯನ್ನು ಪ್ರೀತಿಸುತ್ತಿದ್ದೆ. ದರ್ಶಿತಾ ಬೇರೆ ಕಡೆ ಮದುವೆಯಾದಳು. ಆದರೆ ಪ್ರೀತಿ ಕಣ್ಣಾಮುಚ್ಚಾಲೆ ಮಾತ್ರ ನಿಂತಿರಲಿಲ್ಲ. ಎಲ್ಲಿ ಕೈತಪ್ಪಿ ಹೋಗುತ್ತಾಳೆ ಎಂಬ ಕಾರಣಕ್ಕೆ ಆ.23ರಂದು ಭೇರ್ಯ ಲಾಡ್ಜ್‌ಗೆ ಕರೆದುಕೊಂಡು ಬಂದಿದ್ದೆ ಎಂದು ಸಿದ್ದರಾಜು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. 24ರಂದು ಸಾಲಿಗ್ರಾಮ ಪೊಲೀಸರು ಸಿದ್ದರಾಜುನನ್ನು ಬಂಧಿಸಿ, ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.

ದರ್ಶಿತಾ ಕೇರಳ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದ ಕಾರಣ ಅವಳ ಗಂಡನ ಮನೆಯವರು ದರ್ಶಿತಾ ಶವವನ್ನು ಕೊಂಡೊಯ್ಯುಲಿಲ್ಲ. ಅವಳು ಗಂಡನಿಂದ ದೂರವಿದ್ದು ಸಿದ್ದರಾಜು ಜತೆ ಇದ್ದಳು. ಹಾಗಾಗಿ ದರ್ಶಿತಾಳ ಶವವನ್ನು ತಂದೆ ಕುಮಾರ, ತಾಯಿ ಮಂಗಳಾ ಕೊಂಡೊಯ್ದು ಗೆರಸನಹಳ್ಳಿಯಲ್ಲಿ ಆ.24 ರಂದು ಅಂತ್ಯಕ್ರಿಯೆ ಮಾಡಿದ್ದಾರೆ.

ಮೊದಲು ದರ್ಶಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಲಾಗಿತ್ತು. ಆದರೆ, ನಂತರ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಬಾಯಿ ಛಿದ್ರವಾಗಿರುವುದರಿಂದ ಕೊಲೆ ನಿಗೂಢವಾಗಿದೆ. ಜಿಲೆಟಿನ್ ಕಡ್ಡಿ ಹಾಕಿ ಸಿಡಿಸಲಾಗಿದೆ ಎಂದು ಮಾಧ್ಯಮದಲ್ಲಿ ಬಂದಿದೆ. ದರ್ಶಿತಾ ಮುಖ ಚಿದ್ರವಾದ ಬಗ್ಗೆ ಎಫ್‌ಎಸ್‌ಎಲ್ ವರದಿ ಬಂದ ನಂತರ ದೃಢವಾಗಲಿದೆ ಎಂದು ಸಾಲಿಗ್ರಾಮ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net