

ಬೆಂಗಳೂರು: ಪುನೀತ್ ನಮ್ಮಿಂದ ದೂರವಾಗಿ ಒಂದು ವರ್ಷ ಆಗುತ್ತಾ ಬಂದಿದೆ. ರಾಜ್ಯಾದ್ಯಂತ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಅಪ್ಪು ಕಡೆಗೆ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಇದೀಗ ಇಲ್ಲೊಬ್ಬ ಪೋರ ವಿಶಿಷ್ಟ ರೀತಿಯಲ್ಲಿ ತನ್ನ ಅಭಿಮಾನವನ್ನು ಮೆರೆದಿದ್ದಾನೆ.
ಈತ ತನ್ನ ಫೇವರಿಟ್ ಹೀರೋಗೆ ಪೋಟ್ರೈಟ್ ಚಿತ್ರವನ್ನು ರೂಬಿಕ್ ಕ್ಯೂಬ್ಸ್ ಮೂಲಕ ತಯಾರಿಸಿ ಅರ್ಪಿಸಿದ್ದಾನೆ. ನಗರದ ಏಕ್ಯ ಶಾಲೆಯ ನಾಲ್ಕನೇ ತರಗತಿಯ ಶ್ರೇಷ್ಠ ಪ್ರಭು ಈ ಸಾಧನೆ ಮಾಡಿದ್ದಾನೆ.
ಪ್ರತಿ ರೂಬಿಕ್ಸ್ ಕ್ಯೂಬ್ ಅನ್ನು ಬೇಕಾದ ರೀತಿಯಲ್ಲಿ ತಯಾರಿಸಿಕೊಂಡು ಎಲ್ಲಾ ಕ್ಯೂಬ್ಗಳನ್ನು ಸರಿಯಾಗಿ ಜೋಡಿಸುವುದು ಕಷ್ಟದ ಕೆಲಸ. ಶ್ರೇಷ್ಠ ಈ ಚಿತ್ರವನ್ನು ರೂಬಿಕ್ ಕ್ಯೂಬ್ ಮೂಲಕ ತಯಾರಿಸಲು 2.5 ಘಂಟೆಗಳ ಸಮಯ ಶ್ರಮಿಸಿದ್ದಾರೆ.