ಬುದ್ಧಿ ಹೇಳಿದ್ದಕ್ಕೆ ಸ್ನೇಹಿತನ ಜತೆ ಸೇರಿ ದೊಡ್ಡಮ್ಮನ ಮೇಲೆ ನೀಚ ಕೃತ್ಯ ಎಸಗಿದ ಪಾಪಿ ಮಗ

15 GDG MURDER
Published on

ಗದಗ: ನಗರದ ಕೆ.ಸಿ. ರಾಣಿ ರಸ್ತೆಯ ಮನೆಯೊಂದರಲ್ಲಿ ಇತ್ತೀಚೆಗೆ ನಡೆದಿದ್ದ ಒಂಟಿ ಮಹಿಳೆಯ ಕೊಲೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನ.11 ರಂದು 65 ವರ್ಷದ ಪುಷ್ಪಾ ಹೆಬಸೂರ ಎಂಬ ಮಹಿಳೆಯ ಹತ್ಯೆಯಾಗಿತ್ತು.

ಏನಾದರೂ ಕೆಲಸ ಮಾಡು ಎಂದು ತಮ್ಮ ತಂಗಿಯ ಮಗನಿಗೆ ಹೇಳಿದ್ದೇ ಪುಷ್ಪಾ ಜೀವಕ್ಕೆ ಮುಳುವಾಯಿತು. ಅವರ ಸಹೋದರಿಯ ಪುತ್ರ ಶಿವಮೊಗ್ಗ ಮೂಲದ ಧನುಷ್ ತನ್ನ ಸ್ನೇಹಿತ ವಿನಯನೊಂದಿಗೆ ಸೇರಿ ದೊಡ್ಡಮ್ಮ ಪುಷ್ಪಾ ಅವರನ್ನು ಕಲ್ಲಿನಿಂದ ಜಜ್ಜಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಾಡಿ ಕೊಲೆಗೈದಿದ್ದರು ಎಂದು ಎಸ್ಪಿ ಯತೀಶ ತಿಳಿಸಿದ್ದಾರೆ.

ಪುಷ್ಪಾ ಅವರ ಸಹೋದರಿ ಶಿವಮೊಗ್ಗದಲ್ಲಿ ವಾಸವಾಗಿದ್ದು, ಅವರ ಪುತ್ರನಾದ ಧನುಷ್ ಕೆಲಸ ಮಾಡದೆ ತಿರುಗಾಡುತ್ತಿದ್ದ. ಈ ಕುರಿತು ಪುಷ್ಪಾ ಅವರು ತಮ್ಮ ಸಹೋದರಿಗೆ ಕರೆ ಮಾಡಿ ಮಗನಿಗೆ ಬುದ್ಧಿವಾದ ಹೇಳಿಸಿದ್ದರು. ಇದರಿಂದ ಕೋಪಗೊಂಡಿದ್ದ ಧನುಷ್ ತನ್ನ ಸ್ನೇಹಿತ ವಿನಯ ಜತೆಗೆ ಗದಗ ನಗರಕ್ಕೆ ಆಗಮಿಸಿ ಪುಷ್ಪಾ ಅವರ ಕೊಲೆ ಮಾಡಿ ಪರಾರಿಯಾಗಿದ್ದ. ಈ ಕುರಿತು ತನಿಖೆ ನಡೆಸಿದ ಬಡಾವಣೆ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಯತೀಶ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net